ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮೂಡಬಿದ್ರೆ , ಇದರ 108ನೇ ವರ್ಷದ ಅಷ್ಟೋತ್ತರ ಸಂಭ್ರಮದ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆ ದೇಗುಲದಲ್ಲಿ ಅಷ್ಟಮಿಯ ದಿನ ಏರ್ಪಡಿಸಲಾಯಿತು , ಸುಮಾರು 60 ಸ್ಪರ್ಧಿಗಳು ಭಾಗವಹಿಸಿದ್ದರು. ಆಳ್ವಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ನಿರ್ದೇಶಕ ಶ್ರೀ ವಿವೇಕ್ ಆಳ್ವ ಇವರು ದೀಪ ಪ್ರಜ್ವಲನ ಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣವನ್ನು ಶ್ರೀ ಅಮರ್ ಕೋಟೆ ನೆರವೇರಿಸಿದರು. ಮೂಡಬಿದ್ರೆ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ತಂಡಗಳಾದ ಶ್ರೀ ಕೃಷ್ಣ ಫ್ರೆಂಡ್ ಸರ್ಕಲ್, ನ್ಯೂ ಸೆಂಟ್ರಲ್ ಫ್ರೆಂಡ್, ಜವನೆರ್ ಬೆದ್ರ ಫೌಂಡೇಶನ್, ಬೆದ್ರ ಪಿಲಿ ಹುಲಿ ವೇಷ ತಂಡ, ಯಕ್ಷಗಾನೀಯ ಮೊಸರು ಕುಡಿಕೆ ಖ್ಯಾತಿ ಮೋನಪ್ಪ ಕುಲಾಲ್ ತಂಡ ಇವರಿಗೆ ಸನ್ಮಾನ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಶ್ರೀ ಶಿವಾನಂದ ಪ್ರಭು, ಕೆಎಂಎಫ್ ಅಧ್ಯಕ್ಷರಾದ ಶ್ರೀ ಕೆ ಪಿ ಸುಚರಿತ ಶೆಟ್ಟಿ,ಪೂರ್ವ ಮುಡಾ ಅಧ್ಯಕ್ಷ ಶ್ರೀ ಮೇಘನಾದ ಶೆಟ್ಟಿ ಇವರಿಗೆ ದೇವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲಿ ಸಲ್ಲಿಸಿದ ಅನುಪಮ ಕೈಂಕರ್ಯಕ್ಕಾಗಿ ಗೌರವ ಪ್ರದಾನ ಮಾಡಲಾಯಿತು. ಶ್ರೀಮತಿ ಸ್ಮಿತಾ ಹೊಳ್ಳ ಧನ್ಯವಾದ ಸಮರ್ಪಣೆ ನೆರವೇರಿಸಿದರು.
ಶ್ರೀಮತಿ ಸುಮನಾ ಪ್ರಸಾದ್ ಹಾಗೂ ಶ್ರೀಮತಿ ಬಾಲಿಕಾ ಜೈನ್ ಇವರು ತೀರ್ಪುಗಾರರಾಗಿ ಸಹಕರಿಸಿದರು.
Leave a Reply