ಮೂಡುಬಿದಿರೆ: ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳಲ್ಲೊಂದಾದ ಶಕ್ತಿ ಯೋಜನೆಯಡಿ ಮಂಗಳೂರು-ಮೂಡುಬಿದಿರೆ- ಕಾರ್ಕಳಕ್ಕೆ ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಅನುಮೋದನೆ ದೊರಕಿ ಈಗಾಗಲೇ ಬಸ್ಸು ಸಂಚಾರ ಆರಂಭಗೊಂಡಿದ್ದು, ಇಂದು ಬೆಳಿಗ್ಗೆ ಮೂಡುಬಿದಿರೆ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಹಚ್ಚಿ , ಹಸಿರು ನಿಶಾನೆ ಹಾರಿಸುವ ಮೂಲಕ ಸ್ವಾಗತಿಸಿ ಸಂಭ್ರಮ ಪಟ್ಟರು.
ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ಸ್ವಾಗತಿಸಿ ಮಾತನಾಡಿ, ರಾಮಲಿಂಗಾರೆಡ್ಡಿ, ಡಿ.ಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಭಿನಂದನೆಯನ್ನು ತಿಳಿಸಿದ ಅವರು ತಾನು ಸುಮಾರು ಆರು ತಿಂಗಳಿನಿಂದ ಸರ್ಕಾರ ಬಸ್ಸು ಬರಲು ಶ್ರಮ ಪಟ್ಟಿದ್ದು ಇದರ ಫಲವಾಗಿ ಇಂದು ಮೂಡುಬಿದಿರೆ ಸರ್ಕಾರಿ ಬಸ್ಸು ಬರುವಂತಾಯಿತು ಎಂದರು.
ಕಾಂಗ್ರೆಸ್ ಮುಖಂಡ ಚಂದ್ರಹಾಸ ಸನಿಲ್ ಮಾತನಾಡಿ, ನಮ್ಮ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಇಂದು ಕಾರ್ಕಳ, ಮೂಡುಬಿದಿರೆ, ಮಂಗಳೂರು ಮಾರ್ಗವಾಗಿ ಸರ್ಕಾರಿ ಬಸ್ಸು ಸಂಚಾರಿಸಲು ಅನುಮೋದನೆ ನೀಡಿ ಜನರ ಬಹುದಿನದ ಬೇಡಿಕೆಯಾಗಿರುವಂತಹ ಸರ್ಕಾರಿ ಬಸ್ಸು ಮೂಡುಬಿದಿರೆ ವ್ಯಾಪ್ತಿಯಾದ್ಯಾಂತ ಸಂಚರಿಸುವುದು ಬಹಳ ಖುಷಿಯನ್ನು ಕೊಟ್ಟಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸರಕಾರಿ ಬಸ್ಸುಗಳು ಮೂಡುಬಿದಿರೆಗೆ ಬರುವಂತಾಗಲಿ ಹಾಗೂ ಎಲ್ಲಾ ಜನರು ಇದರ ಪ್ರಯೋಜನ ಪಡೆಯುವಂತಾಗಲಿ. ಶಕ್ತಿ ಯೋಜನೆಯ ಪ್ರಯೋಜನವನ್ನು ಕಾರ್ಕಳದಿಂದ ಮಂಗಳೂರಿಗೆ ಪ್ರಯಾಣಿಸುವ ಎಲ್ಲಾ ಮಹಿಳೆಯರು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಿರಿ. ಎಂದ ಅವರು ಮೂಡುಬಿದಿರೆ ಜನತೆ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ, ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್, ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಪುರಸಭಾ ಸದಸ್ಯರಾದ ಪುರಂದರ ದೇವಾಡಿಗ,ಕೊರಗಪ್ಪ,ಸುರೇಶ್ ಪ್ರಭು,ಇಕ್ಬಾಲ್ ಕರೀಮ್,ಮಮತಾ ಆನಂದ್,ಸುರೇಶ್ ಕೋಟ್ಯಾನ್, ಗ್ಯಾರಂಟಿ ಯೋಜನಾ ಸದಸ್ಯರಾದ ಪುರುಷೋತ್ತಮ ನಾಯಕ್ ಪುತ್ತಿಗೆ, ಹರೀಶ್ ಆಚಾರ್ಯ, ಶಿವಾನಂದ ಪಾಂಡ್ರು,ರಜನಿ,ಗಣೇಶ್, ಮುಡಾ ಸದಸ್ಯರಾದ ಸತೀಶ್ ಭಂಡಾರಿ, ಶೇಖರ್ ಬೊಳ್ಳಿ,ಮುಖಂಡರಾದ ಚಂದ್ರಹಾಸ ಸನಿಲ್,ಪ್ರವೀಣ್ ಶೆಟ್ಟಿ ಪುತ್ತಿಗೆ,ಟಿ.ಎನ್.ಕೆಂಬಾರೆ,ಅನಿಲ್ ಲೋಬೊ,ಬಾಲಕೃಷ್ಣ ಅಶ್ವತ್ಥಪುರ,ರಾಜೇಶ್ ಕಡಲಕೆರೆ,ಅನಿಶ್ ಬೆಳುವಾಯಿ, ಶೌಕತ್ ಬೆಳುವಾಯಿ, ಪ್ರವೀಣ್ ಇರುವೈಲ್,ಅಶ್ಫಾಕ್ ಮಿಜಾರ್, ಸಂತೋಷ್ ಶೆಟ್ಟಿ ಮಿಜಾರ್, ಇಬ್ರಾಹಿಂ, ಅಲ್ತಾಫ್ ,ಕುಮಾರ್,ಸತೀಶ್ ಕೋಟ್ಯಾನ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

Leave a Reply