ನಿರಂತರ ಮಳೆಯಿಂದಾಗಿ ಮನೆ ಕುಸಿತ: ಬೋರುಗುಡ್ಡೆಯಲ್ಲಿ ವೃದ್ಧೆ ಮೃತ್ಯು

ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಬೋರುಗುಡ್ಡೆ ಪ್ರದೇಶದಲ್ಲಿ ನಿನ್ನೆ ರಾತ್ರಿ ಒಂದು ಮನೆ ಸಂಪೂರ್ಣವಾಗಿ ಕುಸಿದ ಪರಿಣಾಮ ವೃದ್ಧೆಯೋರ್ವರು ದುರ್ಮರಣ ಹೊಂದಿದ ದುಃಖದ ಘಟನೆ ನಡೆದಿದೆ.

ಮೃತಳು ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರುಗುಡ್ಡೆ ಜನತಾ ಕಾಲನಿಯ ನಿವಾಸಿ ಪರಿಶಿಷ್ಟ ಜಾತಿಯ ಗೋಪಿ (80ವ) ಎಂದು ಗುರುತಿಸಲಾಗಿದೆ.

ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೋಪಿ ಅವರ ಮನೆಯು ಸೋರುತ್ತಿತ್ತು. ಇದನ್ನು ತಡೆಯಲು, ಮಕ್ಕಳನ್ನು ತರ್ಪಾಲು ಹಾಕಲು ಹೊರಗಡೆ ಕಳುಹಿಸಿದಾಗ, ಮನೆಯನ್ನು ಅಡ್ಡಗಟ್ಟಿದ ಮಳೆಯ ಕಾರಣದಿಂದ ಮನೆಯು ಸಂಪೂರ್ಣ ಕುಸಿಯಿತು. ಗೋಪಿ ಅವರಿಗೆ ತೀವ್ರ ಗಾಯಗಳಾಗಿದ್ದು, ತಕ್ಷಣವೇ ಕಾರ್ಕಳದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಗುರುವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.

ADVRTISEMENT

Leave a Reply

Your email address will not be published. Required fields are marked *