ಮೂಡುಬಿದಿರೆ: ಸ್ಥಳೀಯ ತರಕಾರಿ ಮಾರ್ಕೆಟ್‌ನಲ್ಲಿ ಫಾಸ್ಟ್ ಫುಡ್ ಸ್ಟಾಲ್‌ಗಳು ಪಾದಚಾರಿ ಮಾರ್ಗದ ಮೇಲೆ ಸಿಲಿಂಡರ್‌ಗಳನ್ನು ಇಟ್ಟುಕೊಂಡು ಜನರ ಮೇಲೆ ದರ್ಪ ತೋರಿಸುತ್ತಿದ್ದು, ರಾತ್ರಿಯ ವೇಳೆ ಕುಡುಕರು ಮದ್ಯಗಳನ್ನು ಸೇವಿಸುವುದು ಸಾಮಾನ್ಯವಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಅನೇಕ ಬೀದಿ ನಾಯಿಗಳು ಸುತ್ತುವರಿದಿದ್ದರಿಂದ ಜನರಿಗೆ ಓಡಾಡಲು ಕೂಡ ಕಷ್ಟವಾಗಿದೆ. ಈ ಕುರಿತು ಪುರಸಭಾಧಿವೇಶನದಲ್ಲಿ ಸದಸ್ಯೆ ದಿವ್ಯ ಜಗದೀಶ್ ಅವರ ಸಹಿತ ಸದಸ್ಯರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಶನಿವಾರ ನಡೆದ ಪುರಸಭಾಧಿವೇಶನದಲ್ಲಿ ನೂತನ ಅಧ್ಯಕ್ಷೆ ಜಯಶ್ರೀ ಕೇಶವ್ ಅವರ ಅಧ್ಯಕ್ಷತೆಯಲ್ಲಿ ಫಾಸ್ಟ್ ಫುಡ್ ಸ್ಟಾಲ್‌ಗಳಲ್ಲಿ ಕಲರ್ ಪೌಡರ್, ಫೇಸ್ಟ್‌ಗಳನ್ನು ಬಳಕೆ ಮಾಡಿ ಹಾನಿಕಾರಕ ಆಹಾರವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಚರ್ಚೆಗಳು ನಡೆಯಿತು. ಇದರಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳು ಉಂಟಾಗಬಹುದೆಂದು ಸದಸ್ಯ ಕೊರಗಪ್ಪ ಹೇಳಿದರು. ಅವರು ಫಾಸ್ಟ್ ಫುಡ್ ಸ್ಟಾಲ್‌ಗಳನ್ನು ಸ್ಥಳಾಂತರಿಸಲು ಆಗ್ರಹಿಸಿದರು.
ಈ ಕುರಿತಂತೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಗಳು, ಸ್ಟಾಲ್‌ಗಳನ್ನು ರಿಂಗ್ ರೋಡ್ ಬಳಿ ಸ್ಥಳಾಂತರಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಗಾಂಧಿನಗರದ ಸಮಸ್ಯೆಗಳ ಬಗ್ಗೆ ಚರ್ಚೆ

ಗಾಂಧಿನಗರದ ರಾಯಲ್ ಪ್ಯಾರಡೈಸ್ ಕಟ್ಟಡದಲ್ಲಿ 30 ಕ್ಕೂ ಹೆಚ್ಚು ಮನೆಗಳಿದ್ದು, ಕೊಳಚೆ ನೀರನ್ನು ಸಾರ್ವಜನಿಕ ಸ್ಥಳಕ್ಕೆ ಬಿಡಲಾಗುತ್ತಿದೆ ಎಂದು ಸದಸ್ಯ ಕೊರಗಪ್ಪ ಆರೋಪಿಸಿದರು. ಇದರಿಂದ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಈ ಕುರಿತು ಪುರಸಭಾ ಸದಸ್ಯ ರಾಜೇಶ್, ಎರಡು ವಸತಿ ಸಮುಚ್ಛಯಗಳಲ್ಲಿ ಇದೇ ರೀತಿಯ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಸದಸ್ಯೆ ದಿವ್ಯಾ ಜಗದೀಶ್ ಅವರು ತಮ್ಮ ವಾರ್ಡಿನಲ್ಲಿ ಕೊಳಚೆ ನೀರು ಹೊರಹಾಕುತ್ತಿರುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.
ಮುಂದಿನ ಸಭೆಯಲ್ಲಿ ಅಧಿಕಾರಿಗಳ ಹಾಜರಿ ಕಡ್ಡಾಯ
ಪಾಲ್ಗೊಂಡ ಶಾಸಕ ಉಮಾನಾಥ ಕೋಟ್ಯಾನ್ ಪವರ್‌ಮ್ಯಾನ್‌ಗಳ ಸಭೆ ನಡೆಸಿ, ಮಾನವೀಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಮುಂದಿನ ಸಭೆಯಲ್ಲಿ ಮೆಸ್ಕಾಂ, ಪೊಲೀಸ್, ಮತ್ತು ಅರಣ್ಯ ಇಲಾಖೆಯ ಮುಖ್ಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ನೋಟಿಸ್ ನೀಡಲಾಯಿತು.
ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಹಲವು ವಿಚಾರಗಳು

ಬಸ್ ಸ್ಟ್ಯಾಂಡ್ ಪಾರ್ಕಿಂಗ್ ಸಮಸ್ಯೆ, ಪಾದಚಾರಿಗಳಿಗೆ ಅಪಾಯ, ನಗರೋತ್ಥಾನ ಯೋಜನೆಯಡಿ ಆದೇಶ ಪತ್ರದ ಅನುದಾನ ಬಿಡುಗಡೆ ವಿಳಂಬ, ಮತ್ತು ಇತರ ಅನೇಕ ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸದಸ್ಯರು ಸಮಸ್ಯೆಗಳ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ಸುರೇಶ್ ಪ್ರಭು, ಪುರಂದರ ದೇವಾಡಿಗ, ಮತ್ತು ಪ್ರಸಾದ್ ಕುಮಾರ್ ಭಾಗವಹಿಸಿದ್ದರು.
Leave a Reply