ಮೂಡುಬಿದಿರೆ: ಮದ್ರಸಾ ಪರೀಕ್ಷೆ ಪೇಪರ್ ವಿತರಣೆ

ಮೂಡಬಿದ್ರೆ: ಆಗಸ್ಟ್ 06
ಸಮಸ್ತ ವಿದ್ಯಾಭ್ಯಾಸ ಮಂಡಳಿಯಾದ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಇದರ ಸಿಲಬಸ್ ಪ್ರಕಾರ ಕಾರ್ಯಾಚರಿಸುವ ಎಲ್ಲಾ ಮದ್ರಸಗಳಲ್ಲಿ ನಾಳೆಯಿಂದ ತ್ರೈಮಾಸಿಕ ಪರೀಕ್ಷೆಯು ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಮೂಡುಬಿದ್ರೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಒಳಪಟ್ಟ ಎಲ್ಲಾ ಮದ್ರಸಗಳ ಪರೀಕ್ಷೆ ಪೇಪರ್ ವಿತರಣೆ ಹಿದಾಯತುಲ್ ಇಸ್ಲಾಂ ಮದ್ರಸ ಲಾಡಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಸಯ್ಯಿದ್ ಅಕ್ರಂ ಅಲಿ ತಂಙಳ್ ಅಂಗರಕರ್ಯ ಶರೀಫ್ ಅಝ್ಹರಿ ಇವರಿಗೆ ಪರೀಕ್ಷೆ ಪೇಪರ್ ವಿತರಿಸುವ ಮೂಲಕ ಉದ್ಘಾಟಿಸಿದರು. ರೇಂಜ್ ವ್ಯಾಪ್ತಿಯಲ್ಲಿನ ಸುಮಾರು 29 ಮದ್ರಸಾಗಳ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.

ಈ ಬಾರಿಯ ತ್ರೈಮಾಸಿಕ ಪರೀಕ್ಷೆಯು ಬುಧವಾರದಿಂದ ಪ್ರಾರಂಭಗೊಂಡು ಮುಂದಿನ ಬುಧವಾರಕ್ಕೆ ಕೊನೆಗೊಳ್ಳಲಿದೆ. ಈ ಬಾರಿಯ ಪರೀಕ್ಷೆಯಲ್ಲಿ 1192 ವಿದ್ಯಾರ್ಥಿಗಳು, 1102 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 2294 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲಿದ್ದಾರೆ. ಮುಂಜಾನೆ 6.30 ರಿಂದ 8.30ರ‌ ತನಕ ಏಕಕಾಲಕ್ಕೆ ನಡೆಯಲಿದೆ ಎಂದು ರೇಂಜ್ ಪರೀಕ್ಷಾ ಬೋರ್ಡ್ ಚೇರ್ಮ್ಯಾನ್ ರಫೀಕ್ ದಾರಿಮಿ ಲಾಡಿ ತಿಳಿಸಿದ್ದಾರೆ.

ಪ್ರಕಟಣೆತಲ್ಲಿ ರೇಂಜ್ ಅಧ್ಯಕ್ಷರಾದ ಸಯ್ಯಿದ್ ಅಕ್ರಂ ಅಲಿ ತಂಙಳ್ ಅಂಗರಕರ್ಯ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ದಾರಿಮಿ ಮೂಡುಬಿದ್ರೆ, ಐ.ಟಿ. ಕೋಡಿನೇಟರ್ ಸಫ್ವಾನ್ ಬಾಖವಿ ಪೆರಾಡಿ ಉಪಸ್ಥಿತರಿದ್ದರು.

ADVRTISEMENT

Leave a Reply

Your email address will not be published. Required fields are marked *