ಮೂಡುಬಿದಿರೆ: ಇಲ್ಲಿನ ಜ್ಯೋತಿನಗರದಲ್ಲಿ ಹೊಸದಾಗಿ ಪ್ರಾರಂಭಗೊಂಡ ಮಾರುತಿ ಸುಜುಕಿ ಅರೆನಾ ಶೋ ರೂಮ್ ಅನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಅವರು ಉದ್ಘಾಟಿಸಿ, ಮಾರುಕಟ್ಟೆಗೆ ನೂತನವಾಗಿ ಬಂದ ಡಜ್ಲರ್ ಡಿಜೈರ್ ಕಾರನ್ನು ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು ೧೯೩೦ ರಂದು ಮಂಜುನಾಥ ಪೈ ಅವರು ಬೀಡಿ ಉದ್ದಿಮೆಯಿಂದ ಆರಂಭಗೊಂಡ ಭಾರತ್ ಬೀಡಿ ವರ್ಕ್ಸ್ ನಿಂದ ಆರಂಭಗೊಂಡ ಉದ್ಯಮವು ಇಂದು ಇವರ ಕಂಪೆನಿಯು ಬೃಹತ್ ಮಟ್ಟದಲ್ಲಿ ಬೆಳೆದು ಬಂದಿದೆ. ಇವರ ನಾಲ್ಕು ತಲೆಮಾರುಗಳಿಂದಲೂ ವಾಣಿಜ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾ ಬಂದಿದ್ದಾರೆ. ಈಗ ಮೂಡುಬಿದಿರೆಯಲ್ಲೂ ಬೃಹತ್ ಕಟ್ಟಡದಲ್ಲಿ ಸುಮಾರು ೮೦ ಜನರು ಉದ್ಯೋಗಿಗೊಂದಿಗೆ ಆರಂಭಗೊಂಡ ಇವರ ಉದ್ಯಮಕ್ಕೆ , ಇವರು ಮಾಡುವ ಕೆಲಸ- ಕಾರ್ಯಕ್ಕೆ ದೇವರ ಅನುಗ್ರಹವಿರಲಿ ಎಂದರು.
ಮಾರುತಿ ಸುಜುಕಿ ಶೋ ರೂಮ್ ನ ಮ್ಯಾನೇಜಿಂಗ್ ಡೈರೆಕ್ಟರ್ ಸುಧೀರ್ ಎಮ್ ಪೈ ಮಾತನಾಡಿ, ೧೯೩೦ ರಲ್ಲಿ ನಮ್ಮ ತಾತ ಮಂಜುನಾಥ ಪೈ ಅವರು ಕಾರ್ಕಳದಲ್ಲಿ ಬೀಡಿ ವ್ಯಾಪಾರ ಆರಂಭಿಸಿ, ನಂತರ ಅವರಿಂದ ಆರಂಭಗೊಂಡ ಉದ್ಯಮ ನಂತರ ೨೦೦೦ ರಿಂದ ೨೦೦೬ರ ರ ನಂತರ ಒಂದೊಂದಾಗಿ ಎಲ್ಲಾ ಹೊಸ ವ್ಯಾಪಾರವನ್ನು ಪ್ರಾರಂಭಿಸಿ, ೨೦೦೬ ರಲ್ಲಿ ಭಾರತ್ ಆಟೋವನ್ನು ಮೊದಲು ಆರಂಭಿಸಿದ್ದು ಮಂಗಳೂರಿನಲ್ಲಿ. ೨೮ ಜನರ ಟೀಮ್‌ನೊಂದಿಗೆ ಶುರು ಮಾಡಿ ಇದೀಗ ಬೃಹತಾಗಿ ಬೆಳೆದು, ಮೂಡುಬಿದಿರೆಯಲ್ಲಿ ಎಲ್ಲಾ ವರ್ಕ್ಶಾಪ್, ಸರ್ವೀಸ್‌ಗಳನ್ನು ಸುವ್ಯವಸ್ಥೆಗಳನ್ನೊಳಗೊಂಡ ಶೋರೋಮ್ ಆರಂಭಗೊಂಡಿದ್ದು ಗ್ರಾಹಕರು ಇದರ ಸದ್ಭಾಳಕೆಯನ್ನು ಪಡೆದುಕೊಳ್ಳಲಿ ಎಂದರು.
ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಪುರಸಭಾ ಸದಸ್ಯ ಇಕ್ಬಾಲ್ ಕರೀಂ , ಚೌಟರ ಅರಮನೆಯ ಕುಲದೀಪ್ ಚೌಟ, ಹರ್ಷವರ್ಧನ್ ಪಡಿವಾಳ್, ಅನಂತಕೃಷ್ಣ ರಾವ್, ವಕೀಲೆ ಶ್ವೇತಾ ಜೈನ್, ಸೇಲ್ಸ್ ಮ್ಯಾನೇಜರ್ ಅವಿನಾಶ್ , ವರ್ಕ್ಸ್ ಮ್ಯಾನೇಜರ್ ಚಂದ್ರಹಾಸ, ಜಿ.ಎಮ್ ವಿಶ್ವ ಕುಮಾರ್ ಹಾಗೂ ಗ್ರಾಹಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸೇಲ್ಸ್ ಆರ್.ಎಮ್ ಕುಮಾರಿ ಪ್ರಸನ್ನ ಕಾರ್ಯಕ್ರಮ ನಿರೂಪಿಸಿ, ರವಿ ನಾಯ್ಕ್ ಧನ್ಯವಾದಗೈದರು.

Leave a Reply