ಮಾನವ ಸಂಪನ್ಮೂಲದ ಬಳಕೆ ಮತ್ತು ಪ್ರಾಯೋಗಿಕ ಮಾಹಿತಿ ಅರಿತುಕೊಳ್ಳಿ- ಹಳೆ ವಿದ್ಯಾರ್ಥಿ ದಿವಾಕರ್ ಕದ್ರಿ

ಮೂಡುಬಿದಿರೆ: ಎಂಜಿನಿಯರ್ ಕಾಲೇಜುಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡಷ್ಟೇ ಪ್ರಾಮುಖ್ಯತೆಯನ್ನು ಐಟಿಐ ಕಾಲೇಜುಗಳೂ ಪಡೆದುಕೊಂಡಿವೆ. ಇದೀಗ ತಂತ್ರಜ್ಞಾನಗಳು ಮುಂದುವರಿದಿದ್ದು, ಯಾವುದೇ ಭಾಷೆಯನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯವಿದೆ ಆದ್ದರಿಂದ ಕೀಳರಿಮೆಯನ್ನು ಬಿಡಿ. ತಾವು ಯಾವುದೇ ನಿಧಾ೯ರಗಳನ್ನು ತೆಗೆದುಕೊಳ್ಳುವಾಗ ಸೂಕ್ತ ಸಮಯ, ಸಂದಭ೯ದಲ್ಲಿ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದ ಅವರು ಬೇರೆ ಬೇರೆ ರೀತಿಯ ವಿಷಯಗಳನ್ನು ಅರಿತುಕೊಂಡು ಮಾನವ ಸಂಪನ್ಮೂಲದ ಬಳಕೆ ಮತ್ತು ಪ್ರಾಯೋಗಿಕ ಮಾಹಿತಿಯನ್ನು ಅರಿತುಕೊಂಡರೆ ದೇಶ ಎತ್ತರಕ್ಕೆ ಬೆಳೆಯಲು ಸಾಧ್ಯವಿದೆ ಎಂದು ಕೆಮಿಕಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಕಾರ್ಡೋಲೈಟ್ ಸ್ಪೆಷಾಲಿಟಿ ಜನರಲ್ ಮ್ಯಾನೇಜರ್ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ದಿವಾಕರ್ ಕದ್ರಿ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಎ.ಜಿ ಸೋನ್ಸ್ ಐಟಿಐ ಕಾಲೇಜಿನ ಸಭಾಂಗಣದಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಾಜಿ ಸಚಿವ, ಶ್ರೀ ಮಹಾವೀರ ಕಾಲೇಜಿನಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಶಿತಾ೯ಡಿ ಭುವನಜ್ಯೋತಿ ಎಜ್ಯುಕೇಶನ್ ಟ್ರಸ್ಟ್ ನ ಕಾಯ೯ದಶಿ೯ ಆರ್. ಪ್ರಶಾಂತ್ ಡಿ’ಸೋಜ, ಉಳ್ಳಾಲ ಸಯ್ಯದ್ ಮದನಿ ಕೈತ ಸಂಸ್ಥೆಯ ತರಬೇತಿ ಅಧಿಕಾರಿ ಡೆನಿಸ್ ವಾಸ್, ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಕಾಯ೯ದಶಿ೯ ಡಾ. ರಾಧಾಕೃಷ್ಣ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.
ವಿದ್ಯಾಥಿ೯ ನಾಯಕ ವಿನ್ಸೆಂಟ್ ಕ್ರಾಸ್ತಾ, ಉಪನಾಯಕ ನವೀನ್ ಕುಮಾರ್, ಕಾಯ೯ದಶಿ೯ ಜೀವನ್ ಜೆ. ಪೂಜಾರಿ ಉಪಸ್ಥಿತರಿದ್ದರು.
ವಿದ್ಯಾಥಿ೯ ವೇತನ ವಿತರಣೆ: ಅಲ್ಫ್ರೇಢ್ ಸೋನ್ಸ್ ಫೌಂಡೇಷನ್ ಪ್ರಾಯೋಜಕತ್ವದಲ್ಲಿ ಅಂತಿಮ ವಷ೯ದ ವಿದ್ಯಾಥಿ೯ಗಳಾದ ಚರಿತ್ ( ಇಲೆಕ್ಟ್ರಿಕಲ್ ವಿಭಾಗ), ವಿನೀತ್ ಕುಮಾರ್ ( ಮೆಕ್ಯಾನಿಕ್ ವಿಭಾಗ), ವಿನ್ಸೆಂಟ್ ಕ್ರಾಸ್ತ ( ಮೆಕ್ಯಾನಿಕ್ ಮೋಟಾರು ವೆಹಿಕಲ್ ವಿಭಾಗ) ಹಾಗೂ ಮೆಕ್ಯಾನಿಕ್ ಡೀಸೆಲ್ ವಿಭಾಗದ ನವೀನ್ ಕುಮಾರ್ ಅವರಿಗೆ ವಿದ್ಯಾಥಿ೯ ವೇತನವನ್ನು ವಿತರಿಸಲಾಯಿತು.
ಪ್ರತಿಭಾನ್ವಿತ ವಿದ್ಯಾಥಿ೯ ಸ್ವಸ್ತಿಕ್ ಗೆ ಎಸ್. ಡಿ. ಸಾಮ್ರಾಜ್ಯ ಮೆಮೋರಿಯಲ್ ನಗದು ಪುರಸ್ಕಾರವನ್ನು ನೀಡಲಾಯಿತು.
ತರಬೇತಿ ಅಧಿಕಾರಿ ಶಾಂತಿ ಜಿ. ಸ್ವಾಗತಿಸಿದರು. ಎ. ಜಿ. ಸೋನ್ಸ್ ಐಟಿಐ ನ ಪ್ರಾಂಶುಪಾಲ ಶ್ರೀಕಾಂತ್ ಹೊಳ್ಳ ವರದಿ ವಾಚಿಸಿದರು. ಶಿವಪ್ರಸಾದ್ ಹೆಗ್ಡೆ ಕಾಯ೯ಕ್ರಮ ನಿರೂಪಿಸಿದರು. ರಾಮಚಂದ್ರ ಆಚಾಯ೯ ವಂದಿಸಿದರು.
ಐಟಿಐ ಪ್ರಯೋಗಿಕ ಶಾಲೆಯನ್ನು ಉನ್ನತೀಕರಿಸಲು ಈ ವಷ೯ ರೂ ೧ ಲಕ್ಷ ದೇಣಿಗೆಯನ್ನು ನೀಡಿದ್ದು ಮುಂದಿನ ವಷ೯ವೂ ನೀಡುವುದಾಗಿ
ಕೆಮಿಕಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಕಾರ್ಡೋಲೈಟ್ ಸ್ಪೆಷಾಲಿಟಿ ಜನರಲ್ ಮ್ಯಾನೇಜರ್ ಹಾಗೂ ಹಳೆ ವಿದ್ಯಾರ್ಥಿ ದಿವಾಕರ್ ಕದ್ರಿ ಘೋಷಿಸಿದರು.

ADVRTISEMENT

Leave a Reply

Your email address will not be published. Required fields are marked *