
ಮೂಡುಬಿದಿರೆ: ತಾಲೂಕಿನ ದ.ಕ.ಜಿ.ಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮೈನ್ ಮೂಡುಬಿದಿರೆ ಇಲ್ಲಿ ವಿವೇಕ ಶಾಲಾ ಯೋಜನೆಯಡಿಯಲ್ಲಿ ನಿರ್ಮಾಣವಾಗಿರುವ ಎರಡು ವಿವೇಕ ಕೊಠಡಿಗಳನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ಮಂಗಳವಾರ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಕೀಳರಿಮೆ ಬೇಡ. ಕನ್ನಡ ಮಾಧ್ಯಮದಲ್ಲಿ ಕಲಿತ ಹೆಚ್ಚಿನವರು ಉತ್ತಮ ಹುದ್ದೆಗಳನ್ನು ಅಲಂಕರಿಸಿ ಯಶಸ್ಸನ್ನು ಕಂಡವರಿದ್ದಾರೆ ಎಂದು ಹೇಳಿದರು.ವಿವೇಕ ಶಾಲಾ ಯೋಜನೆಯಡಿ ತಾಲೂಕಿನ ಕೆಲವು ಶಾಲೆಗಳಿಗೆ ಈಗಾಗಲೇ ಹೆಚ್ಚುವರಿ ಕೊಠಡಿಗಳನ್ನು ನೀಡಲಾಗಿದೆ. ಇನ್ನೂ ಹೆಚ್ಚಿನ ಕೊಠಡಿಗಳ ಅಗತ್ಯವಿದ್ದು […]
ಮೂಡುಬಿದಿರೆ: ಹಿರಿಯ ಛಾಯಾಗ್ರಾಹಕ, ಹವ್ಯಾಸಿ ಗಾಯಕ ಅಶ್ರಫ್ ಆಲಿ (62) ರವಿವಾರ ನಿಧನ ಹೊಂದಿದರು.ಪತ್ನಿ, 2 ಪುತ್ರರು, 2 ಪುತ್ರಿಯರನ್ನು ಅಗಲಿದ್ದಾರೆ.ಮೂಡುಬಿದಿರೆಯಲ್ಲಿ ಗೆಳೆಯರ ಬಳಗ, ಚದುರಂಗ ಸಾಂಸ್ಕೃತಿಕ ಸಂಘಟನೆಗಳಲ್ಲಿ ನಟ, ಗಾಯಕರಾಗಿ ಸಕ್ರಿಯರಾಗಿದ್ದ ಅಶ್ರಫ್ ಆಲಿ ಛಾಯಾಗ್ರಾಹಕರಾಗಿ, Adla network ಕೇಬಲ್ TV ಯಲ್ಲಿ ವೀಡಿಯೋ ಗ್ರಾಫರ್ ಆಗಿ ವೃತ್ತಿ ಜೀವನ ಆರಂಭಿಸಿ, ಕೆಲಕಾಲ ವಿದೇಶದಲ್ಲೂ ಕೆಲಸ ಮಾಡಿ ಮರಳಿ ಊರಲ್ಲೇ ಛಾಯಾಗ್ರಾಹಕ, ವೀಡಿಯೊ ಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿಯ 169 ರಲ್ಲಿ ಹಾದು ಹೋಗುವ ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜ್ ಪಕ್ಕದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯ ಪರಿಣಾಮವಾಗಿ ಬೈಕ್ ಸವಾರನೊಬ್ಬ ನಿನ್ನೆ ರಾತ್ರಿ ಬಲಿಯಾದ ಘಟನೆ ನಡೆದಿದೆ.ಗಂಜಿಮಠದ ನಿವಾಸಿ ಅಬ್ದುಲ್ ಖಾದರ್ (69) ಮೃತಪಟ್ಟ ವ್ಯಕ್ತಿ.ಮಿಜಾರಿನಲ್ಲಿ ರಾ. ಹೆ. ಕಾಮಗಾರಿಯು ಅಪೂಣ೯ ಸ್ಥಿತಿಯಲ್ಲಿದ್ದು ಅಲ್ಲಿ ಮೋರಿಯ ದೊಡ್ಡ ಚರಂಡಿಗೆ ಅಡ್ಡವಾಗಿ ಹೊಂಡ ತೋಡಿ ಅದಕ್ಕೆ ಕಾಂಕ್ರೀಟ್ ಬೆಡ್ಡಿಂಗ್ ಹಾಕಲಾಗಿದ್ದು ಅಲ್ಲಿ ಯಾವುದೇ ಸೂಚನಾ ಫಲಕವನ್ನು ಅಳವಡಿಸಲಿಲ್ಲ. ಅಲ್ಲಿ ಹೊಂಡ ಇರುವುದು ರಾತ್ರಿ ಯಾರ […]
ಮೂಡುಬಿದಿರೆ:ತಾಲೂಕಿನ ನ್ಯಾಯಾಲಯ ಆವರಣದಲ್ಲಿ ಮೂಡುಬಿದಿರೆ ಅರಣ್ಯ ಇಲಾಖೆ ಹಾಗು ಮೂಡುಬಿದಿರೆ ವಕೀಲರ ಸಂಘ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ & ವನಮಹೋತ್ಸವ ಕಾರ್ಯಕ್ರಮ ಗುರುವಾರ ನಡೆಯಿತು.ಮುಖ್ಯ ಅತಿಥಿಗಳಾಗಿ ಮಧುಕರ್ ಭಾಗವತ್,ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಧೀಶರು, ಕಾವೇರಮ್ಮ ನ್ಯಾಯಾಧೀಶರು, ಸಸಿಗಳನ್ನು ನೆಟ್ಟರು.ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರು ಹರೀಶ್ ಪಿ, ಹಿರಿಯ ವಕೀಲರಾದ ಕೆ. ಆರ್ ಪಂಡಿತ್, ದಿವಿಜೇಂದ್ರ ಕುಮಾರ್, ಪ್ರವೀಣ್ ಲೋಬೊ, ಜಯಪ್ರಕಾಶ್, ಪದ್ಮಪ್ರಸಾದ್ ಜೈನ್, ಮರ್ವಿನ್ ಲೋಬೊ, ಆನಂದ್, ಶ್ವೇತಾ, ಸಂದೇಶ್, ಜಗನ್ನಾತ್, ವಕೀಲರು ಹಾಗು ಅರಣ್ಯ […]
ಮೂಡುಬಿದಿರೆ: ತಾಲೂಕಿನಾದ್ಯಾಂತ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಬಡಜನರಿಗೆ ಇನ್ಮುಂದೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟವುಳ್ಳ ಊಟ, ತಿಂಡಿ ದೊರೆಯಲಿದೆ. ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ದಿನಂಪ್ರತಿ ವಿವಿಧ ಬಗೆಯ ತಿಂಡಿಗಳಿಗೆ ಕೇವಲ ೫ ರೂ ಮೊತ್ತದಲ್ಲಿ ಹಾಗೂ ಊಟವೂ ೧೦ ರೂ ದರದಲ್ಲಿ ಸಿಗಲಿದೆ. ಯಾವ್ಯಾವ ದಿನ ಯಾವೆಲ್ಲಾ ಬಗೆಯ ಊಟ ತಿಂಡಿಗಳು ಸಿಗುತ್ತದೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮೂಡುಬಿದಿರೆ: ಅಸಂಘಟಿತ ಕಾರ್ಮಿಕರು, ಬಡವರು ಹಸಿವಿನಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಾದ್ಯಂತ ಇಂದಿರಾ ಕ್ಯಾಂಟೀನನ್ನು ಆರಂಭಿಸಿದ್ದಾರೆ. ಇದು ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಇಲ್ಲಿನ ಆಡಳಿತ ಸೌಧದ ಎದುರು ಅವರು ಬುಧವಾರ ಇಂದಿರಾ ಕ್ಯಾಂಟೀನನ್ನು ಉದ್ಘಾಟಿಸಿ ಮಾತನಾಡಿದರು. ಅಗ್ಗದ ದರದಲ್ಲಿ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ಸಿಗುತ್ತದೆ. ಬಡವರ ಹಸಿವು ನೀಗಿಸುವ ಇಂತಹ ಉತ್ತಮ ಸೌಲಭ್ಯ ದೇಶದ ಬೇರೆ ಯಾವ ರಾಜ್ಯಗಳಲ್ಲು ಇಲ್ಲ. […]
ಮೂಡುಬಿದಿರೆ: ಹಟ್ಟಿಗೆ ಬೆಂಕಿ ತಗುಲಿ ಕಂಬಳದ ಕೋಣಗಳು ಸಾವನಪ್ಪಿದ ದುರ್ಘಟನೆ ಮೇ 30ರ ರಾತ್ರಿ ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಬೇಲಾಡಿಯಲ್ಲಿ ಸಂಭವಿಸಿದೆ. 2022-23ನೇ ಕಂಬಳ ಸಾಲಿನಲ್ಲಿ ಕನಹಲಗೆಯಲ್ಲಿ ಚಾಂಪಿಯನ್ ಪಡೆದ ಬೇಲಾಡಿ ಬಾವ ಅಶೋಕ್ ಶೆಟ್ಟಿಯವರ ಅಪ್ಪು ಮತ್ತು ತೋನ್ಸೆ ಸಾವಿಗೀಡಾದ ಕೋಣಗಳು. ವಿದ್ಯುತ್ ಶಾರ್ಟ್ ಸರ್ಕೂಟ್‌ನಿಂದಾಗಿ ಬೆಂಕಿ ಹತ್ತಿಕೊಂಡಿದೆ ಎನ್ನಲಾಗುತ್ತಿದೆ.
ಮೂಡುಬಿದಿರೆ: ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೊಹಮ್ಮದ್ ವಸೀರ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತೇನೆಂದು ಘೋಷಿಸಿದ್ದಾರೆ.
ಮೂಡುಬಿದಿರೆ: ಕಳೆದ ಒಂದು ವಾರದಿಂದ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದ ಮೂಡುಬಿದಿರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವಲ್ಲಿ ಮಣ್ಣು ಕರಗಿ ತಗ್ಗು ಪ್ರದೇಶದತ್ತ ಹರಿದು ದಿನ ನಿತ್ಯ ಓಡಾಡುವ ರಸ್ತೆಗಳೆಲ್ಲಾ ಕೆಸರುಗದ್ದೆಗಳಾಗಿ ಬಿಟ್ಟಿವೆ. ಜನ, ವಾಹನಗಳ ಓಡಾಟಕ್ಕೆ ತೊಂದರೆಯುಂಟಾಗಿದೆ.ಅಲಂಗಾರು ಪರಿಸರದಲ್ಲಿ ವಿಶೇಷವಾಗಿ ಕಾನ, ಪೊಯ್ಯದದಲ್ಯ ಅಂಬೂರಿ ಮೊದಲಾದ ಪ್ರದೇಶದಲ್ಲಿ ಹಾದು ಹೋಗುವ ಹೆದ್ದಾರಿ ಮಳೆಗಾಲದ ಆರಂಭಕ್ಕೂ ಮುನ್ನ ಮಳೆಗಾಲದ ಸಂಭಾವ್ಯ ಆಪಾಯ, ತೊಂದರೆಗಳ ಬಗ್ಗೆ ಗುತ್ತಿಗೆದಾರರು ಮುನ್ನೆಚ್ಚರಿಕೆ ತೆಗೆದುಕೊಳ್ಳದ ಕಾರಣ ಸಮಸ್ಯೆ ಬಿಗಡಾಯಿಸಿದೆ.ಹೆದ್ದಾರಿ ನಿರ್ಮಾಣವಾಗುವ ಹಂತದಲ್ಲಿ ಈ ಭಾಗದ […]
ಮೂಡುಬಿದಿರೆ: ಮೂಡುಬಿದಿರೆ ಜನರ ಪ್ರಮುಖ ಬೇಡಿಕೆಯಾಗಿದ್ದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಅಧಿಕೃತಗೊಳಿಸಲು ಇಂದು ಸ್ಥಳ ಪರಿಶೀಲನೆ ನಡೆಸಲಾಯಿತು.ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಪುರಸಭೆ, ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಜಂಟಿಯಾಗಿ ಮೂಡುಬಿದಿರೆ ರಾಜೀವ್ ಗಾಂಧಿ ವಾಣಿಜ್ಯ ಸಂರ್ಕೀಣದ ಮುಂಭಾಗದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.ಧರ್ಮಸ್ಥಳ-ಉಡುಪಿ, ಕಾರ್ಕಳ- ಮಂಗಳೂರು ರಾಜ್ಯ ಸಾರಿಗೆ ಬಸ್‌ಗಳು ಮೂಡುಬಿದಿರೆ ಮೂಲಕ ಸಂಚರಿಸುವಾಗ ಪ್ರಯಾಣಿಕರನ್ನು ಬಸ್‌ಗೆ ಹತ್ತಿಸಲು ಮತ್ತು ಇಳಿಸಲು ಈ ಬಸ್ ನಿಲ್ದಾಣವನ್ನು ಬಳಸಿಕೊಳ್ಳಲು ಈ ಸಂದರ್ಭದಲ್ಲಿ ನಿರ್ಧರಿಸಲಾಯಿತು.ರಸ್ತೆ ಬದಿಯ […]