
ಮೂಡುಬಿದಿರೆ:ಮಾಂಟ್ರಾಡಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಎಕ್ರೆಗಟ್ಟಲೆ ಸರಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದು ಈ ಬಗ್ಗೆ ದೂರು ಕೊಟ್ಟರೂ ಕಂದಾಯ ಇಲಾಖೆ ಕ್ರಮ ವಹಿಸಿಲ್ಲ ಎನ್ನಲಾಗಿದೆ.ಮಾಂಟ್ರಾಡಿ ಗ್ರಾಮದ ಸ.ನಂ 88-1ರಲ್ಲಿ ಎಲಿಯಾಸ್ ಸಲ್ದಾನ ಎಂಬವರು ತನ್ನ ಸ್ವಾಧೀನದಲ್ಲಿದ್ದ ಸರಕಾರಿ ಜಾಗವನ್ನು ಸಕ್ರಮಗೊಳಿಸುವಂತೆ ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದು ಅವರ ಅರ್ಜಿ ವಿಚಾರಣೆ ಹಂತದಲ್ಲಿದೆ ಎನ್ನಲಾಗಿದೆ. ಈ ಮಧ್ಯೆ ಆಂತೋನಿ ಡಿಸೋಜಾ ಎಂಬವರು ನನ್ನ ಸ್ವಾಧೀನದಲ್ಲಿರುವ ಸರಕಾರಿ ಜಾಗದಲ್ಲಿ ಅಕ್ರಮವಾಗಿ ೧೫ ಕ್ಕೂ ಹೆಚ್ಚು ಪಿಲ್ಲರ್‌ಗಳನ್ನು ಹಾಕಿ ಜಾಗವನ್ನು ತನ್ನ ವಶಕ್ಕೆ […]
ಮೂಡುಬಿದಿರೆ : ಕಾಮಿಡಿ ಕಿಲಾಡಿ ವಿನ್ನರ್ ಮಲ್ಪೆಯ ರಾಕೇಶ್ ಪೂಜಾರಿ (34) ಹೃದಯಾಘಾತದಿಂದ ನಿಧನ ಹೊಂದಿದರು. ಮೇ 11ರಂದು ಮಿಯ್ಯಾರಿನ ತನ್ನ ಗೆಳೆಯನ ಮೆಹೆಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾನ್ಸ್ ಮಾಡುತ್ತಿದ್ದ ಸಂದರ್ಭರಾಕೇಶ್ ಪೂಜಾರಿ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಕಾರ್ಕಳ ಗಾಜಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಬಳಿಕ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆಗಾಗಲೇ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ ಹೊಂದಿದರು ಎಂದು ತಿಳಿದುಬಂದಿದೆ.ಮೃತರು ತಾಯಿ ಹಾಗೂ ತಂಗಿಯನ್ನು ಅಗಲಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ […]
ಮೂಡುಬಿದಿರೆ : ಭಕ್ತರು ತಮಗೆ ಸೇರಿದ ದೇವಾಲಯಗಳನ್ನು ಸುಸಜ್ಜಿತವಾಗಿಸಿಕೊಳ್ಳಬೇಕು. ದೇವರ ದರ್ಶನ, ಸೇವೆ ನಿರಂತರವಾಗಿದ್ದಾಗ ಕ್ಷೇತ್ರಕ್ಕೆ ಹೆಚ್ಚು ಶಕ್ತಿ ಬರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ದರೆಗುಡ್ಡೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ದೇವರು ಎಲ್ಲೆಡೆಯೂ ಇದ್ದಾನೆ. ಆದರೆ ದೇವರ ಸಾನಿಧ್ಯವಿದ್ದರೆ ಅಲ್ಲಿ ಎಲ್ಲರೂ ಒಗ್ಗೂಡಲು ಸಾಧ್ಯ. ದೇವರ ಸಾನಿಧ್ಯವನ್ನು […]
ಮೂಡುಬಿದಿರೆ:ಭಯೋತ್ಪಾದಕರು ಹಿಂದೂ ಪ್ರವಾಸಿಗರ ಜಾತಿ ಕೇಳಿ, ಪ್ಯಾಂಟ್ ಬಿಚ್ಚಿಸಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸಂತ್ರಸ್ಥರಿಗೆ ಪ್ರಧಾನಿಯವರಿಂದ ಕೇವಲ ಸಾಂತ್ವನ ಸಾಲದು. ಪ್ರಧಾನಿಯಷ್ಟೆ ಸಾಮಾನ್ಯ ಜನರ ಜೀವಕ್ಕೂ ಬೆಲೆ ಇದೆ. ಆದ್ದರಿಂದ ಪಹಲ್ಲಾಮ್ ಘಟನೆಗೆ ಪಾಕಿಸ್ತಾನದ ವಿರುದ್ಧ ಪ್ರತಿಕಾರ ತೀರಿಸುವುದೆ ಸೂಕ್ತ ಪರಿಹಾರ ಎಂದು ಯುವ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.ಅವರು ದರೆಗುಡ್ಡೆ ಇಟಲ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಂಗಳವಾರ ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಪ್ರಭಾವಿಯಾಗಿರುವ ಈಶ್ವರ ಶಾಂತ ರೀತಿಯ ವ್ಯಕ್ತಿತ್ವವನ್ನು ಹೊಂದಿರುವವ […]
ಮೂಡುಬಿದಿರೆ:ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ನ ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಉದ್ಯಮಿ, ನಿಶ್ಮಿತಾ ಸಂಸ್ಥೆಗಳ ಮುಖ್ಯಸ್ಥ ನಾರಾಯಣ ಪಿ.ಎಂ.ಅವರು ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ರಾಜಾರಾಮ್,ಕೊರಗ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುದರ್ಶನ ಎಂ, ಕಾರ್ಯದರ್ಶಿಯಾಗಿ ಗಂಗಾಧರ ಎಂ ಹಾಗೂ ಕೋಶಾಧಿಕಾರಿಯಾಗಿ ಚೇತನ್ ಕುಮಾರ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.
ಮೂಡುಬಿದಿರೆ : ಮಹತೋಭಾರ ಸೋಮನಾಥೇಶ್ವರ ದೇವಸ್ಥಾನ ಇಟಲ ದರೆಗುಡ್ಡೆ, ಸೋಮನಾಥೇಶ್ವರ ದೇವರ ಕ್ಷೇತ್ರವು ಸಂಪೂರ್ಣ ಶಿಲಾಮಯವಾಗಿ ಪುನರ್ ನಿರ್ಮಿಸಿ ಇದೀಗ ಬ್ರಹ್ಮಕಲಶೋತ್ಸವವು ಮೆ.೨ರಂದು ನಡೆಯಲಿದ್ದು ಆ ಪ್ರಯುಕ್ತ ವೈಭವದ ಹೊರೆಕಾಣಿಕೆ ಮೆರವಣಿಗೆಯು ಭಾನುವಾರ ಸಂಜೆ ನಡೆಯಿತು.ಅಳಿಯೂರು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮೈದಾನದಿಂದ ಹೊರಟ ವೈಭವಯುತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.ಬಳಿಕ ಸುಮಾರು ೨.ಕಿ.ಮೀ ದೂರದ ದರೆಗುಡ್ಡೆ ಇಟಲ ದೇವಸ್ಥಾನದವರೆಗೆ ನಡೆದ ಮೆರವಣಿಗೆಯಲ್ಲಿ […]
ಮೂಡುಬಿದಿರೆ: ಇಲ್ಲಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಕೇಂದ್ರದಲ್ಲಿ ‘ಲಾಸಿಕ್ ಲೇಸರ್ ಕಣ್ಣಿನ ಉಚಿತ ತಪಾಸಣಾ ಶಿಬಿರ’ವು ಎಪ್ರಿಲ್ 19, ಶನಿವಾರದಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ.18 ವರ್ಷ ಪ್ರಾಯದಿಂದ ಸುಮಾರು 40 ವರ್ಷ ಪ್ರಾಯದವರೆಗಿನವರಿಗೆ ಮಾಡಬಹುದಾದ ಅತ್ಯಾಧುನಿಕ ಲೇಸರ್ ಚಿಕಿತ್ಸೆಯ ಮೂಲಕ ಕನ್ನಡಕ ಮತ್ತು ಕಾಂಟಾಕ್ಟ್ ಲೆನ್ಸ್‌ನಿಂದ ಮುಕ್ತಿ ಹೊಂದಬಹುದಲ್ಲದೇ ಈ ಚಿಕಿತ್ಸೆಯಿಂದ 5 ನಿಮಿಷಗಳಲ್ಲಿ ಪರಿಶುದ್ಧವಾದ ದೃಷ್ಟಿಯನ್ನು ಪಡೆಯಬಹುದು. ಚಿಕಿತ್ಸೆಯ ನಂತರ ಕೂಡಲೇ ರೋಗಿಯು ತನ್ನೆಲ್ಲಾ ದೈನಂದಿನ ಚಟುವಟಿಕೆಗಳನ್ನು […]
ಮೂಡುಬಿದಿರೆ: ವಿಶ್ವಪ್ರವಾದಿ ಮುಹಮ್ಮದ್ ಮುಸ್ತಫಾ ( ಸ.ಅ.) ಅವರ ಸಂದೇಶಗಳನ್ನು , ಹಿರಿಯರು ,ಉಲೆಮಾ -ಉಮರಾಗಳ ಮಾತುಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಹೋದಲ್ಲಿ ಸರ್ವಜನರ ಪ್ರೀತಿಗೆ ಪಾತ್ರರಾಗಲು ಮತ್ತು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ’ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರು ಹೇಳಿದರು.ಮೂಡುಬಿದಿರೆ ಸಮೀಪದ ಪುಚ್ಚಮೊಗರು ಎಲಿಯಾ ದರ್ಗಾದ ಉರೂಸ್ ಸಮಾರಂಭ ಪ್ರಯುಕ್ತ ಹಮ್ಮಿಕೊಂಡಿದ್ದ ಸರ್ವಧರ್ಮ ಸೌಹಾರ್ದ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಯುವಜನತೆ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಬೇಕು, ಹಿಂದೆಲ್ಲಾ ಯಾವುದೇ […]
ಮೂಡುಬಿದಿರೆ: ಭಗವಾನ್ ಶ್ರೀ ಮಹಾವೀರ ಸ್ವಾಮಿಯ, 2624ನೇ ಜನ್ಮ ಕಲ್ಯಾಣ ಮಹೋತ್ಸವ, ಮಹಾವೀರ ಜಯಂತಿಯ ದಿನವಾದ ಗುರುವಾರ ಸಂಜೆ ಬೆಟ್ಕೇರಿಯಿಂದ ಸಾವಿರ ಕಂಬದ ಬಸದಿ ವರೆಗೆ ಮಹಾವೀರ ಸ್ವಾಮಿಯ ವೈ ಭವದ ಮೆರವಣಿಗೆಯು ನಡೆಯಿತು. ಜೈನ ಮಠದ ಭಟ್ಟಾರಕ ಚಾರುಕೀತಿ೯ ಪಂಡಿತಾಚಾಯ೯ವಯ೯ ಸ್ವಾಮೀಜಿ ಮೆರವಣಿಗೆಗೆ ಚಾಲನೆಯನ್ನು ನೀಡಿದರು. ಮಹಾವೀರ ಸ್ವಾಮಿಯ ಮೂತಿ೯ ಮತ್ತು ಧವಳಗ್ರಂಥಗಳನ್ನು ಮೆರವಣಿಗೆಯಲ್ಲಿ ಹೊತ್ತು ತರಲಾಯಿತು.ನಂತರ 125 ಮಂದಿಯಿಂದ ಸಾಮೂಹಿಕ ಅಷ್ಟ ವಿಧಾಚ೯ನೆ ಸೇವೆ ನಡೆಯಿತು.ವಕೀಲ ಎಂ. ಬಾಹುಬಲಿ ಪ್ರಸಾದ್, ಪಟ್ಣಶೆಟ್ಟಿ ಎಂ. ಸುದೇಶ್ […]
ಮೂಡುಬಿದಿರೆ: ತಾಲೂಕಿನ ರಾಷ್ಟೀಯ ಹಬ್ಬಗಳ ಆಚರಣ ಸಮಿತಿ ಆಶ್ರಯದಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ನಡೆದ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಮಹಾವೀರರ ಭಾವಚಿತ್ರದೆದುರು ದೀಪ ಬೆಳಗಿಸಿ ಮೂಡುಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸಿದರು.ನಂತರ ಸಂದೇಶ ನೀಡಿದ ಸ್ವಾಮೀಜಿಭಗವಾನ್ ಮಹಾವೀರರು ಬದುಕು ಬದುಕಲು ಬಿಡು ಎಂಬ ತತ್ವ ಸಾರಿದವರು. ಇವತ್ತಿಗೂ ಭಗವಾನ್ ಮಹಾವೀರರ ಸಂದೇಶಗಳು ಪ್ರಸ್ತುತವಾಗಿದೆ. ಅಹಿಂಸೋ ಪರಮೋ ಧರ್ಮ ಎಂಬ ಸಂದೇಶವನ್ನು ಮನೆ-ಮನಗಳಿಗೆ ಮುಟ್ಟಿಸುವ ಕೆಲಸ ಮಾಡೋಣ ಎಂದ ಅವರು […]