ಮೂಡುಬಿದಿರೆ: ಅರೇಬಿಯಾದ ಜುಬೈಲ್‌ನಲ್ಲಿ ಬಸ್ ಓಡಿಸುತ್ತಿರುವ ಕಲ್ಲಬೆಟ್ಟುವಿನ ಮೂಡುಬಿದಿರೆ ಮೊಹ್ಮದ್ ಆಲಿ ಎಂಬುವರು ತನ್ನ ಬಸ್ ಹಿಂಬದಿಯ ಗಾಜಿನಲ್ಲಿ ‘ಬೆದ್ರ (ಮೂಡುಬಿದಿರೆ) ಎಂದು ಬರೆದು ಹುಟ್ಟೂರಿನ ಪ್ರೀತಿಯನ್ನು ತಾನು ಕೆಲಸ ಮಾಡುತ್ತಿರುವ ದೂರದ ಸೌದಿಯಲ್ಲಿ ಪಸರಿಸುತ್ತಿದ್ದಾರೆ. ಸೌದಿಯಲ್ಲಿ ಅವರು ಸ್ವಂತ ಬಸ್ ಹೊಂದಿದ್ದು ಮಕ್ಕಾ, ಮದೀನಾದಂತಹ ಪವಿತ್ರ ಕ್ಷೇತ್ರಕ್ಕೆ ಯಾತ್ರಾರ್ಥಿಗಳನ್ನು ಬಾಡಿಗೆಗೆ ಕರೆದೊಯ್ಯುತ್ತಿದ್ದಾರೆ. ಉಳಿದ ಸಮಯಗಳಲ್ಲಿ ಕಂಪನಿಗಳ ಕೆಲಸಗಳಿಗೂ ಬಸ್ ಅನ್ನು ಬಾಡಿಗೆ ಕೊಡುತ್ತಿದ್ದಾರೆ. ಹಲವು ವರ್ಷಗಳಿಂದ ಅವರು ಸೌದಿಯಲ್ಲಿ ನೆಲೆಸಿದ್ದಾರೆ.
ಮೂಡುಬಿದಿರೆಯ ಕಲ್ಲಬೆಟ್ಟು ಗ್ರಾಮದ ಪಿಲಿಪಂಜರದವರಾಗಿರುವ ಮೊಹ್ಮದ್ ಹುಟ್ಟೂರಿನಲ್ಲಿ ಹಲವು ವರ್ಷ ‘ಕೊಹಿನೂರು ಹೆಸರಿನ ರಿಕ್ಷಾವನ್ನು ಬಾಡಿಗೆಗೆ ಓಡಿಸುತ್ತಿದ್ದರು. ಅದೇ ಹೆಸರನ್ನು ಅವರು ಸೌದಿಯಲ್ಲಿ : ಬಸ್‌ಗೆ : ಇಟ್ಟಿದ್ದಾರೆ. ‘ಬೆದ್ರ ನನ್ನ ಹುಟ್ಟೂರು. ಇಲ್ಲಿ ಓದಿ, ದೊಡ್ಡವನಾಗಿದ್ದೇನೆ. ನಾನು ಪ್ರಸ್ತುತ ಕೆಲಸ ಮಾಡುತ್ತಿರುವ ಸೌದಿಯ ಜುಬೈಲ್‌ನಲ್ಲಿ: ತುಂಬಾ ಮಂದಿ ಮೂಡುಬಿದಿರೆಯ ಸ್ನೇಹಿತರಿದ್ದಾರೆ. ಹುಟ್ಟೂರಿನ ಪ್ರೀತಿ, ಅಭಿಮಾನದಿಂದ ನನ್ನ ಬಸ್‌ನ ಹಿಂಬದಿ ಗಾಜಿನಲ್ಲಿ ‘ಬೆದ್ರ’ ಎಂಬ ಹೆಸರು ಬರೆದಿದ್ದೇನೆ” ಎಂದು ಮೊಹ್ಮದ್ ಆಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರ ಬೆದ್ರ ಹೆಸರಿನ ಬಸ್‌ನ ಫೋಟೋ ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ.
Leave a Reply