ಕಂದಾಯ ದಾಖಲೆ ಗಣಕೀಕರಣ ವ್ಯವಸ್ಥಾ ಪ್ರಕ್ರಿಯೆ ಉದ್ಘಾಟನೆ

ಮೂಡುಬಿದರೆ: ತಾಲೂಕಿನ ಪ್ರತಿಯೊಬ್ಬರ ಭೂ ಸಂಬಂಧ ದಾಖಲೆಗಳು ನಾಶವಾಗಬಾರದು, ಸ್ಥಳಾವಕಾಶದ ಕೊರತೆಯಿಂದ ಹಾಳಾಗಬಾರದು ಎನ್ನುವ ದೃಷ್ಟಿಯಿಂದ ಸರಕಾರದ ಯೋಜನೆಯಂತೆ ಡಿಜಿಟಲೀಕರಣ ಮಾಡಲು ನಿರ್ಧರಿಸಲಾಗಿದೆ. ಆ ಪ್ರಕಾರದಲ್ಲಿ ಪ್ರತಿಯೊಬ್ಬರ ಆರ್ ಟಿ ಸಿ, ಮ್ಯುಟೇಶನ್ ಇತ್ಯಾದಿ ಎಲ್ಲಾ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಿ ಸಂಗ್ರಹಿಸಿ ಇಡುವ ವ್ಯವಸ್ಥೆಯನ್ನು ಎರಡು ಮೂರು ತಿಂಗಳಲ್ಲಿ ಸಂಪೂರ್ಣ ಗೊಳಿಸಲಾಗುವುದು ಎಂದು ಮುಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದರು.
ಅವರು ಬುಧವಾರ  ತಾಲೂಕು ಕಚೇರಿಯ ಭೂ ಸುರಕ್ಷಾ ಯೋಜನೆ ಅಡಿ ಅಭಿಲೇಖಾಲಯದ ಕಂದಾಯ ದಾಖಲೆ ಗಣಕೀಕರಣಗೊಳಿಸುವ ಕಾರ್ಯಕ್ರಮದ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಕುಸುಮಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಪುರಸಭಾ ಮುಖ್ಯಾಧಿಕಾರಿ  ಇಂದು ಎಂ, ಪುರಸಭಾ ಸದಸ್ಯ ಕೊರಗಪ್ಪ ಹಾಗೂ ಇತ್ಯಾದಿಯರು ಹಾಜರಿದ್ದರು. ತಾಲೂಕು ತಹಸೀಲ್ದಾರ್ ಪ್ರದೀಪ್ ಹುರ್ಡೇಕರ್ ಸ್ವಾಗತಿಸಿ, ವಂದಿಸಿದರು.
ಗಣಕೀಕರಣದ ಉಸ್ತುವಾರಿಗಳಾದ ನೀಲೇಶ್, ಅಕ್ಷಯ್, ಸನತ್ ಕುಮಾರ್, ತುಳಸಿ, ಜಸ್ವಿತಾ, ಹರ್ಷಿತ ಅವರುಗಳು ಗಣಕೀಕರಣವನ್ನು ಆದಷ್ಟು ಶೀಘ್ರ ಮಾಡಿ ಕೊಡಲು ಒಪ್ಪಿಕೊಂಡರು.

ADVRTISEMENT

Leave a Reply

Your email address will not be published. Required fields are marked *