



ಮೂಡುಬಿದಿರೆ: ಮೂಡುಬಿದಿರೆ ಇಲ್ಲಿನ ಜ್ಯೋತಿನಗರದಲ್ಲಿ ಹೊಸದಾಗಿ ಪ್ರಾರಂಭಗೊಂಡ ಮಾರುತಿ ಸುಜುಕಿ ಅರೆನಾ ಶೋ ರೂಮ್ ಅದ್ದೂರಿಯಾಗಿ ಇಂದು ಸಂಜೆ ಶುಭಾರಂಭಗೊಳ್ಳಲಿದೆ.ಶೋ ರೂಮ್ ನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಅವರು ಉದ್ಘಾಟಿಸಲಿದ್ದಾರೆ.ಇದೇ ಸಂದರ್ಭದಲ್ಲಿ 4 ನೇ ತಲೆಮಾರಿನ ಡಿಜೈರ್ ಕಾರನ್ನು ಲೋಕಾರ್ಪಣೆಗೊಳ್ಳಲಿದೆ.ಈ ಸಂದರ್ಭದಲ್ಲಿ ಮತ್ತಿತರ ಗಣ್ಯರುಗಳು ಪಾಲ್ಗೊಂಡು ಶುಭಹಾರೈಸಲಿದ್ದಾರೆ.

ಮೂಡುಬಿದಿರೆ : ಕರಾವಳಿಯ ಮರಾಟಿ ಸಮುದಾಯದ ನ್ಯಾಯಯುತ ಬೇಡಿಕೆಗಳನ್ನು ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಿ, ಮುಖ್ಯಮಂತ್ರಿಯವರ ಗಮನಕ್ಕೆ ತಂದು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪ ಹೇಳಿದರು.ಅವರು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ಭಾನುವಾರ ನಡೆದ ಕರಾವಳಿ ಮರಾಟಿ ಸಮಾವೇಶ 2024 ‘ಗದ್ದಿಗೆ’ಯನ್ನು ಉದ್ಘಾಟಿಸಿ ಮಾತನಾಡಿದರು.ಸಂವಿಧಾನದ ಆಶಯವನ್ನು ಈಡೇರಿಸುವಲ್ಲಿ ಚುನಾಯಿತ ಪ್ರತಿನಿಧಿಗಳು ರಾಜಕೀಯ ಬಿಟ್ಟು ಕೆಲಸ ಮಾಡಬೇಕು. ಶಿಕ್ಷಣದ ಮೂಲಕ ಆರ್ಥಿಕ ಸದೃಢತೆ ಸಾಧ್ಯ. ರಾಜಕೀಯ ಉದ್ದೇಶ ಇಲ್ಲದೆ ಆರ್ಥಿಕವಾಗಿ […]

ಮೂಡುಬಿದಿರೆ : ಆಟೋ ರಿಕ್ಷಾ ಮಾಲಕ _ ಚಾಲಕರ ಸಂಘದ ಮೂಡುಬಿದಿರೆ ತಾಲೂಕು ಇದರ ಶ್ರೀ ಧನಲಕ್ಷ್ಮೀ ಪೂಜೆ ಮತ್ತು ವಾಹನ ಪೂಜೆಯು ಸಮಾಜ ಮಂದಿರ ಆಟೋ ಪಾರ್ಕ್ ನಲ್ಲಿ ದೀಪಕ್‌ರಾಜ್ ಕೊಡಂಗಲ್ಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭ ರಿಕ್ಷಾ ಚಾಲಕರಾದ ಜಯರಾಮ್ ರಾವ್, ರಾಜೇಶ್ ಸುವರ್ಣ, ಅಬ್ದುಲ್ ರಹ್ಮಾನ್ ಇವರನ್ನು ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿ ಚೌಟರ ಅರಮನೆ ಕುಲದೀಪ ಎಂ, ಅಧ್ಯಕ್ಷರು ಎಮ್.ಸಿ.ಎಸ್ ಬ್ಯಾಂಕ್ ಬಾಹುಬಲಿ ಪ್ರಸಾದ್, ಪುರಸಭಾ ಸದಸ್ಯ ಕೊರಗಪ್ಪ, ಬಿಜೆಪಿ ಮುಖಂಡ ಕೆ.ಪಿ ಜಗದೀಶ […]

ಮೂಡುಬಿದಿರೆ: ತಾಲೂಕಿನಲ್ಲಿ ಭಾನುವಾರ ಸಂಜೆ ಬೀಸಿದ ಬಿರುಗಾಳಿ ಮಳೆಗೆ ಕೋಟೆಬಾಗಿಲು ಮತ್ತು ಕಲ್ಲಬೆಟ್ಟುವಿನಲ್ಲಿ ರಸ್ತೆಗೆ ಅಡ್ಡವಾಗಿ ಮರಗಳು ಉರುಳಿ ಬಿದ್ದ ಪರಿಣಾಮವಾಗಿ ವಾಹನ ಸಂಚಾರಕ್ಕೆ ತಡೆಯುಂಟಾದ ಘಟನೆ ನಡೆದಿದೆ.ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜು ಬಳಿಯ ರಾಜ್ಯ ಹೆದ್ದಾರಿ ಮತ್ತು ಕೋಟೆಬಾಗಿಲು ಮಸೀದಿ ಬಳಿ ಶಿರ್ತಾಡಿ ರಾಜ್ಯ ಹೆದ್ದಾರಿಗೆ ಮರ ಬಿದ್ದ ಪರಿಣಾಮ ಮರಿಯಾಡಿ ಬಳಿಯ ಒಳರಸ್ತೆಯ ಮೂಲಕ ವಾಹನ ಸಂಚಾರ ನಡೆಯಿತು.ಕೋಟೆಬಾಗಿಲು ಪ್ರಗತಿ ರಸ್ತೆಯಲ್ಲೂ ಮರಬಿದ್ದಿದೆ. ಮುರಮೇಲುನಲ್ಲಿ ಟಿಸಿ ಮತ್ತು ಕೆಲವು ವಿದ್ಯುತ್ ಕಂಬಗಳೂ ಬಿದ್ದು ವಿದ್ಯುತ್ ಸಂಪರ್ಕ […]

ಮೂಡುಬಿದಿರೆ: ಸಾಮಾಜಿಕ ಸೇವೆ ಸಲ್ಲಿಸುವ ಸಂಘಟನೆ ತ್ರಿಶೂಲ್ ಫ್ರೆಂಡ್ಸ್ ರಿ.ಬೆದ್ರ ಇವರ ಯೋಜನೆಯ ಅಡಿಯಲ್ಲಿ ಮೂಡುಮಾರ್ನಾಡು ತಂಡ್ರಕೆರೆ ಎಂಬಲ್ಲಿ ಸಂಘಟನೆಯ ಯುವಕರೇ ಒಟ್ಟು ಸೇರಿ ನೂತನವಾಗಿ ನಿರ್ಮಿಸಲಾದ ಮನೆಯನ್ನು ಭಾನುವಾರ ಮನೆಯ ಯಜಮಾನ ಸುಂದರ ಇವರಿಗೆ ರಜಿನಿ ಶೆಟ್ಟಿ ಹಾಗೂ ಸಂಘಟನೆಯ ಯುವಕರು ಜತೆಗೂಡಿ ನಾಮಫಲಕವನ್ನು ಬಿಡುಗಡೆಗೊಳಿಸಿ ಮನೆಯ ಕೀ ಯನ್ನು ಹಸ್ತಾಂತರಿಸಿದರು.ಕೀ ಹಸ್ತಾಂತರಿಸಿ ಮಾತನಾಡಿದ ರಜಿನಿ ಶೆಟ್ಟಿ ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯಿಂದ ಇನ್ನಷ್ಟು ಸಮಾಜ ಸೇವೆಯನ್ನು ಮಾಡುವಂತಾಗಲಿ, ಇವರ ಉತ್ತಮ ಸೇವಾ ಯೋಜನೆಗಳಿಗೆ ಭಗವಂತನ ಅನುಗ್ರಹವಿರಲೆಂದು […]

ಮೂಡುಬಿದರೆಯ ರೋಟರಿ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಆಳ್ವಾಸ್ ವಿದ್ಯಾಲಯದ ಕನ್ನಡ ಭಾಷಾ ಉಪನ್ಯಾಸಕಿ ಶ್ರೀಮತಿ ಸುಧಾರಾಣಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ಭಾಷೆ ನಾಶವಾದರೆ ಸಂಸ್ಕೃತಿ ನಾಶವಾದಂತೆ.. ಯಾವುದೇ ಭಾಷೆಯ ಪದ ಅಳಿದರೆ ಜಗ ಅಳಿದಂತೆ,ಭಾಷೆಯನ್ನು ಪ್ರೀತಿಸುವುದು ಒಂದು ಭಾವನೆ…. ತಾಯಿ ಮಗಳು ಎಂಬ ಭಾವನೆಯಲ್ಲಿ ಭಾರತ ಮಾತೆಯನ್ನು ಮತ್ತು ಕರ್ನಾಟಕ ಮಾತೆ ಪೂಜಿಸಬೇಕು ಮತ್ತು ಗೌರವಿಸಬೇಕು…ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಅನಂತ ಕೃಷ್ಣರಾವ್ ಇವರು […]

ಎಡಪದವು ಪೂಪಾಡಿಕಲ್ಲು ನಿವಾಸಿ ಅಕ್ಷಯ್ ಕುಮಾರ್(25 ವರ್ಷ) ಇವರು ತನ್ನ ಚಿಕ್ಕ ವಯಸ್ಸಿನಲ್ಲಿ ತನ್ನೆರಡೂ ಕಿಡ್ನಿ ಕಳೆದುಕೊಂಡು, ಸಂಕಷ್ಟದಲ್ಲಿದ್ದು ತನ್ನ ತಾಯಿಯ ಕಿಡ್ನಿಯನ್ನು ಟ್ರಾನ್ಸ್ ಪ್ಲಾಂಟ್ ಮಾಡಲು ನಿರ್ಧರಿಸಿ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಈ ಶಸ್ತ್ರಚಿಕಿತ್ಸೆಗೆ ಸುಮಾರು 10 ರಿಂದ 12 ಲಕ್ಷ ಮೊತ್ತದ ಅವಶ್ಯಕತೆಯಿದೆ ಎಂದು ವೈದ್ಯರು ತಿಳಿಸಿರುತ್ತಾರೆ. ತೀರ ಬಡತನದ ಕುಟುಂಬಕ್ಕೆ ದಾನಿಗಳಾದ ನಿಮ್ಮೆಲ್ಲರ ಸಂಪೂರ್ಣ ಸಹಕಾರ ಕೋರುತ್ತಿದ್ದೇವೆ. NAME: AKSHAY KUMAR A/C NUMBER: 0657108019525 IFSC CODE: CNRB0000657 BRANCH: THENKA […]

ಮೂಡುಬಿದಿರೆ : ಬಿಲ್ಲವ ಮಹಿಳೆಯರನ್ನು ಅವಮಾನಿಸಿ ಕುಣಿತ ಭಜನೆ ಮಾಡುವ ಹೆಣ್ಣು ಮಕ್ಕಳ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿದ್ದ ಪುತ್ತೂರು ವಲಯ ಕಾಣಿಯೂರು ಅರಣ್ಯಾಧಿಕಾರಿ ಸಂಜೀವ ಕಾಣಿಯೂರು ವಿರುದ್ಧ ಭಜಕರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಯನ್ನು ಉದ್ಯೋಗದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಮೂಡುಬಿದಿರೆ ಪೊಲೀಸ್ ಠಾಣೆಗೆ ಭಜನೆಯ ಕಾರ್ಯಕರ್ತರು ಪ್ರತಿಭಟನಾ ರೂಪವಾಗಿ ದೂರನ್ನು ನೀಡಿದರು. ಮಹಿಳೆಯರ ಬಗ್ಗೆ ಮತ್ತು ಕುಣಿತ ಭಜನೆ ಮಾಡುವ ಮಕ್ಕಳ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದ ಅರಣ್ಯ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಆತನ […]

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (RUPSA)ಕೊಡ ಮಾಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಮೂಡುಬಿದಿರೆ ತಾಲೂಕಿನ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಸ್ಕೃತ ಅಧ್ಯಾಪಕ ಗಜಾನನ ಮರಾಠೆ ಮತ್ತು ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಇವರು ಆಯ್ಕೆಯಾಗಿದ್ದಾರೆ ಅಕ್ಟೋಬರ್ 21ರಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ

ಕಳೆದ ನಾಲ್ಕೈದು ವರ್ಷಗಳಿಂದ ಮೂಡುಬಿದಿರೆ ಮಾರ್ಕೆಟ್ ಕಟ್ಟಡ ವಿವಾದ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಕೊನೆಗೂ ಅಂತಿಮ ತೀರ್ಪು ಬಂದಿದೆ. ಶುಕ್ರವಾರ ನಡೆದ ವಿಚಾರಣೆಯಲ್ಲಿ, ಮೂಡುಬಿದಿರೆ ಪುರಸಭೆ ಹಾಗೂ ಮಾರ್ಕೆಟ್ ಕಟ್ಟಡಕ್ಕೆ ಪೂರಕವಾದ ತೀರ್ಪು ನೀಡಲಾಗಿದೆ ಎಂದು ತಿಳಿದುಬಂದಿದೆ. ಸುದೀರ್ಘ ಕಾಲದ ವಿಚಾರಣೆ ನಂತರ, ಹೈಕೋರ್ಟ್ ಪುರಸಭೆಗೆ ಮೂರು ವಾರಗಳಲ್ಲಿ ಪ್ರಾಚ್ಯ ಇಲಾಖೆಗೆ ಕಟ್ಟಡ ಕಾಮಗಾರಿ ಮುಂದುವರಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಲು ಆದೇಶ ನೀಡಿದ್ದು, ಪ್ರಾಚ್ಯ ಇಲಾಖೆ ಅದರ ನಂತರ ನಾಲ್ಕು ವಾರಗಳಲ್ಲಿ ಅನುಮತಿ ನೀಡಬೇಕೆಂದು ಆದೇಶಿಸಿದೆ. […]