Category: Mdb Live 24

  • “61ನೇ ವರ್ಷದ ಶ್ರೀ ಗಣೇಶೋತ್ಸವ: ಶೋಭಾಯಾತ್ರೆ ವೇಳೆ ವಾಹನ ಸಂಚಾರದಲ್ಲಿ ಬದಲಾವಣೆ”

    “61ನೇ ವರ್ಷದ ಶ್ರೀ ಗಣೇಶೋತ್ಸವ: ಶೋಭಾಯಾತ್ರೆ ವೇಳೆ ವಾಹನ ಸಂಚಾರದಲ್ಲಿ ಬದಲಾವಣೆ”

    ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 61ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ನಾಳೆ ನಡೆಯಲಿರುವ ಶೋಭಾಯಾತ್ರೆ ವೇಳೆ ವಾಹನ ಸಂಚಾರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರು ತಿಳಿಸಿದ್ದಾರೆ. ಮಧ್ಯಾಹ್ನ 12 ಗಂಟೆಯ ನಂತರ ಸಾರ್ವಜನಿಕರು ತಮ್ಮ ವಾಹನಗಳನ್ನು ನಗರಕ್ಕೆ ತರದೆ, ಮೂಡುಬಿದಿರೆಯ ಹೊರವರ್ತುಲ (ಬೈಪಾಸ್ ರಸ್ತೆ) ಹಾಗೂ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ. ಇನ್ನು ಬೆಳಿಗ್ಗೆಯಿಂದ ಕಾರ್ಯಕ್ರಮ ಮುಗಿಯುವವರೆಗೂ ವಾಹನಗಳನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡುವುದನ್ನು ತಪ್ಪಿಸಲು ಸಹಕರಿಸುವಂತೆ […]

    Continue Reading

  • “ಹಬ್ಬ-ಹರಿದಿನಗಳ ಸಮಯದಲ್ಲಿ ನೆರವಾಗಲು ಮೂಡುಬಿದಿರೆ ಸಮಾಜ ಮಂದಿರ ಸಭಾ ವತಿಯಿಂದ ಪೊಲೀಸ್ ಇಲಾಖೆಕ್ಕೆ ಬ್ಯಾರಿಕೇಡ್ ಹಸ್ತಾಂತರ”

    “ಹಬ್ಬ-ಹರಿದಿನಗಳ ಸಮಯದಲ್ಲಿ ನೆರವಾಗಲು ಮೂಡುಬಿದಿರೆ ಸಮಾಜ ಮಂದಿರ ಸಭಾ ವತಿಯಿಂದ ಪೊಲೀಸ್ ಇಲಾಖೆಕ್ಕೆ ಬ್ಯಾರಿಕೇಡ್ ಹಸ್ತಾಂತರ”

    ಮೂಡುಬಿದಿರೆ ಸಮಾಜ ಮಂದಿರ ಸಭಾ ವತಿಯಿಂದ ಸುಮಾರು ಒಂದು ಲಕ್ಷ ರೂ. ಅಧಿಕ ಮೌಲ್ಯದ ಹತ್ತು ಬ್ಯಾರಿಕೇಡ್ ಮೂಡುಬಿದಿರೆ ಪೊಲೀಸ್ ಠಾಣೆಗೆ ಹಸ್ತಾಂತರ ಕಾರ್ಯಕ್ರಮ ಸಮಾಜ ಮಂದಿರದಲ್ಲಿ ನಡೆಯಿತು. ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ. ಜಿ. ಯವರಿಗೆ ಬ್ಯಾರಿಕೇಡ್ ಹಸ್ತಾಂತರಿಸಿದರು. ನಂತರ ಮಾತನಾಡಿದ ಅಭಯಚಂದ್ರರವರು ರಸ್ತೆ ಸಮಸ್ಯೆನಿವಾರಣೆ, ಹಬ್ಬ ಹರಿದಿನಗಳ ಸಂದರ್ಭದಲ್ಲಿ ಪೊಲೀಸರಿಗೆ ಅನುಕೂಲವಾಗಲೆಂದು ಬ್ಯಾರಿಕೇಡ್ ನೀಡಿರುವುದಾಗಿ ತಿಳಿಸಿದರು. ಸಂದೇಶ್ ಪಿ. ಜಿ.ಯವರು ಮಾತನಾಡಿ ಸಮಾಜ […]

    Continue Reading

  • ಮೂಡುಬಿದಿರೆಯಲ್ಲಿ ಕುದಿ ಕಂಬಳಕ್ಕೆ ಚಾಲನೆ

    ಮೂಡುಬಿದಿರೆಯಲ್ಲಿ ಕುದಿ ಕಂಬಳಕ್ಕೆ ಚಾಲನೆ

    ಮೂಡುಬಿದಿರೆ: ಇಲ್ಲಿನ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಸಮಿತಿಯಿಂದ ಒಂಟಿಕಟ್ಟೆಯ ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುವ 22 ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಪೂರ್ವಭಾವಿಯಾಗಿ ನಡೆಯುವ ಕುದಿ ಕಂಬಳವು ಬುಧವಾರ ಆರಂಭಗೊಂಡಿತು.ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಕುದಿ ಕಂಬಳಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.ಪುರಸಭಾ ಉಪಾಧ್ಯಕ್ಷ ನಾಗರಾಜ ಫೂಜಾರಿ, ಕಂಬಳ ಸಮಿತಿಯ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು, ಬೆಳುವಾಯಿ ಗ್ರಾ.ಪಂ.ಸದಸ್ಯ ರಘು ಮತ್ತಿತರರು ಈ ಸಂದರ್ಭದಲ್ಲಿದ್ದರು.

    Continue Reading

  • ಮೂಡುಬಿದಿರೆ: ವೃದ್ಧೆಯ ಚಿನ್ನದ ಸರ ಎಗರಿಸಿ ಪರಾರಿಯಾದ ದ್ವಿಚಕ್ರ ವಾಹನ ಸವಾರರು!”

    ಮೂಡುಬಿದಿರೆ: ವೃದ್ಧೆಯ ಚಿನ್ನದ ಸರ ಎಗರಿಸಿ ಪರಾರಿಯಾದ ದ್ವಿಚಕ್ರ ವಾಹನ ಸವಾರರು!”

    ಮೂಡುಬಿದಿರೆ: ದಾರಿ ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಎಗರಿಸಿದ ದ್ವಿಚಕ್ರ ವಾಹನ ಸವಾರರು! ಮೂಡುಬಿದಿರೆ, ಸೋಮವಾರ: ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಸವಾರರು ವೃದ್ಧೆಯೊಬ್ಬರ ಬಳಿ ದಾರಿ ಕೇಳುವ ನೆಪದಲ್ಲಿ ಮಾತನಾಡಿ, ಆಕೆಯ ಕುತ್ತಿಗೆಯಲ್ಲಿದ್ದ 3 ಪವನ ಚಿನ್ನದ ಸರವನ್ನು ಎಗರಿಸಿ ಪರಾರಿಯಾದ ಘಟನೆ ದ.ಕ ಜಿಲ್ಲೆಯ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರ್ನಾಡಿನಲ್ಲಿ ಸಂಭವಿಸಿದೆ. ಮಾರ್ನಾಡು ವರ್ಧಮಾನ ಬಸದಿ ಬಳಿಯ 82 ವರ್ಷದ ವೃದ್ಧೆ ಪ್ರೇಮಾ ಅವರು ತಮ್ಮ ಮನೆಯ ಸಮೀಪದ ಅಂಗಡಿಯಿಂದ ಹಾಲು […]

    Continue Reading

  • ಮೂಡುಬಿದಿರೆ: ತರಕಾರಿ ಮಾರ್ಕೆಟ್‌ನಲ್ಲಿನ ಫಾಸ್ಟ್ ಫುಡ್ ಸ್ಟಾಲ್‌ಗಳ ಅವ್ಯವಸ್ಥೆ, ಮೆಂಬರ್ಸ್ ಅಸಮಧಾನ

    ಮೂಡುಬಿದಿರೆ: ತರಕಾರಿ ಮಾರ್ಕೆಟ್‌ನಲ್ಲಿನ ಫಾಸ್ಟ್ ಫುಡ್ ಸ್ಟಾಲ್‌ಗಳ ಅವ್ಯವಸ್ಥೆ, ಮೆಂಬರ್ಸ್ ಅಸಮಧಾನ

    ಮೂಡುಬಿದಿರೆ: ಸ್ಥಳೀಯ ತರಕಾರಿ ಮಾರ್ಕೆಟ್‌ನಲ್ಲಿ ಫಾಸ್ಟ್ ಫುಡ್ ಸ್ಟಾಲ್‌ಗಳು ಪಾದಚಾರಿ ಮಾರ್ಗದ ಮೇಲೆ ಸಿಲಿಂಡರ್‌ಗಳನ್ನು ಇಟ್ಟುಕೊಂಡು ಜನರ ಮೇಲೆ ದರ್ಪ ತೋರಿಸುತ್ತಿದ್ದು, ರಾತ್ರಿಯ ವೇಳೆ ಕುಡುಕರು ಮದ್ಯಗಳನ್ನು ಸೇವಿಸುವುದು ಸಾಮಾನ್ಯವಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಅನೇಕ ಬೀದಿ ನಾಯಿಗಳು ಸುತ್ತುವರಿದಿದ್ದರಿಂದ ಜನರಿಗೆ ಓಡಾಡಲು ಕೂಡ ಕಷ್ಟವಾಗಿದೆ. ಈ ಕುರಿತು ಪುರಸಭಾಧಿವೇಶನದಲ್ಲಿ ಸದಸ್ಯೆ ದಿವ್ಯ ಜಗದೀಶ್ ಅವರ ಸಹಿತ ಸದಸ್ಯರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಶನಿವಾರ ನಡೆದ ಪುರಸಭಾಧಿವೇಶನದಲ್ಲಿ ನೂತನ ಅಧ್ಯಕ್ಷೆ ಜಯಶ್ರೀ ಕೇಶವ್ ಅವರ […]

    Continue Reading

  • ಮೂಡುಬಿದಿರೆಯಲ್ಲಿ ಸಂಚಾರಿ ಫಲಕಗಳ ಅನಾವರಣ

    ಮೂಡುಬಿದಿರೆಯಲ್ಲಿ ಸಂಚಾರಿ ಫಲಕಗಳ ಅನಾವರಣ

    ಮೂಡುಬಿದಿರೆ: ಇಲ್ಲಿನ ಪುರಸಭೆ ಮತ್ತು ಹಲವು ಸಂಘ ಸಂಸ್ಥೆಗಳ ವತಿಯಿಂದ ಅಳವಡಿಸಲಾಗಿರುವ ಸಂಚಾರಿ ಫಲಕಗಳನ್ನು ಶಾಸಕ ಉಮಾನಾಥ ಕೋಟ್ಯಾನ್ ಶನಿವಾರ ಅನಾವರಣಗೊಳಿಸಿದರು. ಈ ಸಮಾರಂಭದಲ್ಲಿ ಪುರಸಭಾಧ್ಯಕ್ಷ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಸದಸ್ಯರಾದ ಪಿ.ಕೆ. ಥೋಮಸ್, ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ., ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು. ಸಂಚಾರಿ ಫಲಕಗಳು ಸಾರ್ವಜನಿಕರಿಗೆ ಉತ್ತಮ ದಾರಿದೀಪದಂತೆ ಕಾರ್ಯನಿರ್ವಹಿಸುವುದಕ್ಕಾಗಿ ಹಾಗೂ ಸಂಚಾರ ಸುಗಮಗೊಳಿಸುವ ದೃಷ್ಟಿಯಿಂದ ಅಳವಡಿಸಲಾಗಿದ್ದು, ಈ ಪ್ರಯತ್ನವನ್ನು […]

    Continue Reading

  • “14 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಮೂಡುಬಿದಿರೆ ಪೊಲೀಸರು”

    “14 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಮೂಡುಬಿದಿರೆ ಪೊಲೀಸರು”

    14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ ಹಳೆ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 14 ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ಆರೋಪಿಯೋರ್ವನನ್ನು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ನೇತೃತ್ವದ ಪೊಲೀಸರ ತಂಡವು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಬಂಧಿತ ಆರೋಪಿ ಮಂಗಳೂರು ತಾಲೂಕು ಕೊಳವೂರಿನ ಅಯ್ಯನ ಮನೆ ನಿವಾಸಿ ರಮೇಶ (38) ಎಂದು ಗುರುತಿಸಲಾಗಿದೆ. 2010ರಲ್ಲಿ ಮೂಡುಬಿದಿರೆಯ ಗಾಂಧಿನಗರದ ನ್ಯೂ ಕಿರಣ್ ಫ್ಯಾಕ್ಟರಿಗೆ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ, ಬ್ಯಾಂಕ್ ನವರು ಫ್ಯಾಕ್ಟರಿಯ ಸ್ಥಿರಾಸ್ತಿ ಹಾಗೂ ಸೊತ್ತುಗಳನ್ನು 2010 ಸೆಪ್ಟೆಂಬರ್ […]

    Continue Reading

  • ಮೂಡುಬಿದಿರೆಯ 108 ನೇ ವರ್ಷದ ಮೊಸರುಕುಡಿಕೆ ಉತ್ಸವಕ್ಕೆ ದಾಖಲೆಯ ಜನಸಂದೋಹ

    ಮೂಡುಬಿದಿರೆಯ 108 ನೇ ವರ್ಷದ ಮೊಸರುಕುಡಿಕೆ ಉತ್ಸವಕ್ಕೆ ದಾಖಲೆಯ ಜನಸಂದೋಹ

    ಶ್ರೀ ಗೋಪಾಲಕೃಷ್ಣ ದೇವರ 108 ವರ್ಷದ ಮೊಸರುಕುಡಿಕೆ ಸಲುವಾಗಿ ಜವನೇರ್ ಬೆದ್ರ ಫೌಂಡೇಶನ್ ಹಾಕಿರುವ ಮೊಸರು ಕುಡಿಕೆಯ ಮಂಟಪ ಬಳಿ ದೇವರ ಸಮ್ಮುಖದಲ್ಲಿ , ಟೀಮ್ ಬೆದ್ರ ಪಿಲಿ ಅವರ ಹುಲಿ ವೇಷ,108 ಭಜಕರ ತಂಡ, ಸರ್ವೋದಯ ಫ್ರೆಂಡ್ಸ್ ಅವರ ನಾಸಿಕ್ ಬ್ಯಾಂಡ್, ಪವರ್ ಫ್ರೆಂಡ್ ಅವರ ಸಿಂಗಾರಿ ಮೇಳ , ಯಕ್ಷಗಾನ ಶೈಲಿಯ ಶ್ರೀ ಕೃಷ್ಣ 108 ವರ್ಷ ಮೊಸರು ಕುಡಿಕೆ ಹೊಡೆಯುವ ಆಕರ್ಷಕ ಜನಸಮೋಹ ಸೇರಿರುವ ಭಾವಚಿತ್ರ , ಈ ಬಾರಿ 108 ನೇ […]

    Continue Reading

  • “ಮಾಳದ ಶ್ರೀ ಗುರುಕುಲ ಶಾಲೆಯಲ್ಲಿ ಕೃಷ್ಣವೇಷ ಸ್ಪರ್ಧೆ: ವಿವಿಧ ವಯೋಮಾನದ 50 ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನ”

    “ಮಾಳದ ಶ್ರೀ ಗುರುಕುಲ ಶಾಲೆಯಲ್ಲಿ ಕೃಷ್ಣವೇಷ ಸ್ಪರ್ಧೆ: ವಿವಿಧ ವಯೋಮಾನದ 50 ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನ”

    ಗುರುಕುಲ ಶಾಲೆಯಲ್ಲಿ ಕೃಷ್ಣವೇಷ ಸ್ಪರ್ಧೆ. ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣವೇಷ ಸ್ಪರ್ಧೆ ನಡೆಯಿತು. ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆಗೊಂಡ ಸ್ಪರ್ಧೆಯಲ್ಲಿ0 – 2 / 2 – 5 /5 – 10 / ವರ್ಷದೊಳಗಿನ ಮಾಳ ಗ್ರಾಮದ ವ್ಯಾಪ್ತಿಯ ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ಶ್ರೀ ಶ್ರೀರಂಗ ಜೋಶಿ, ಡಾ| ಸತ್ಯನಾರಾಯಣ ಭಟ್, ಶ್ರೀಮತಿ ರಮಿತಾ ಶೈಲೇಂದ್ರ ರಾವ್ ಕಾರ್ಕಳ. ಇವರು ಆಗಮಿಸಿದ್ದರು. […]

    Continue Reading

  • ಮಾಜಿ ಸಚಿವ ಕೆ. ಅಭಯಚಂದ್ರರಿಗೆ ಶ್ರೀ ಕೃಷ್ಣ ಪ್ರಶಸ್ತಿ ನೀಡಿ ಗೌರವ

    ಮಾಜಿ ಸಚಿವ ಕೆ. ಅಭಯಚಂದ್ರರಿಗೆ ಶ್ರೀ ಕೃಷ್ಣ ಪ್ರಶಸ್ತಿ ನೀಡಿ ಗೌರವ

    ಮೂಡುಬಿದಿರೆಯಲ್ಲಿ ಮಂಗಳವಾರ ನಡೆದ 38ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಅವರಿಗೆ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಶ್ರೀ ಕೃಷ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಭಯಚಂದ್ರರ ರಾಜಕೀಯ, ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರದ ಸೇವೆಯನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಉದ್ಯಮಿ ಶ್ರೀಪತಿ ಭಟ್, ಪುರಸಭಾಧ್ಯಕ್ಷೆ ಜಯಶ್ರೀ, ಮುಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಬಿಜೆಪಿ ಮುಖಂಡ ಸುದರ್ಶನ ಎಂ, […]

    Continue Reading