



ದೇಶದ 78ನೇ ಸ್ವಾತಂತ್ರೋತ್ಸವದ ಅಂಗವಾಗಿ ಪವರ್ ಫ್ರೆಂಡ್ಸ್ ವತಿಯಿಂದ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಸಂಭ್ರಮದ ಸ್ವಾತಂತ್ರೋತ್ಸವನ್ನು ಆಚರಿಸಲಾಯಿತು. ಮೂಡ ಅಧ್ಯಕ್ಷರಾದ ಹರ್ಷವರ್ಧನ್ ಪಡಿವಾಳ್ ಧ್ವಜಾರೋಹಣ ನೆರವೇರಿಸಿದರು. ಮಿತ್ತಬೈಲು ಶಶಿಧರ್ ನಾಯಕ್, ಪವರ್ ಫ್ರೆಂಡ್ಸ್ ಅಧ್ಯಕ್ಷರು ಮತ್ತು ಸದಸ್ಯರು ಈ ಸಂದರ್ಭದಲ್ಲಿದ್ದರು.

ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಉನ್ನತಿಕರಿಸಿದ ಶಾಲೆ ಆರಂಬೋಡಿ ಇಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಹಾಗೂ ಸಮಾಜ ಸೇವಕ ಕಿರಣ್ ಕುಮಾರ್ ಮಂಜಿಲ ಇವರು ಕೊಡುಗೆಯಾಗಿ ನೀಡಿದ ಶಾಲಾ ಮಕ್ಕಳ ಸಮವಸ್ತ್ರ ಕಾರ್ಯಕ್ರಮ ವು ಆರಂಬೋಡಿ ಶಾಲೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು ಈ ಸಂದರ್ಭದಲ್ಲಿ ಕಿರಣ್ ಮಂಜಿಲರವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು

ಮೂಡುಬಿದಿರೆ: ವ್ಯಕ್ತಿ, ಸಮುದಾಯ, ದೇಶ ಸೇರಿದಂತೆ ಸರ್ವರಲ್ಲಿ ನಿರ್ಭೀತ ಸ್ವಾತಂತ್ರ‍್ಯದ ಸಂಸ್ಕೃತಿ ನಮ್ಮದಾಗಬೇಕು ಎಂದು ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ ಆಶಿಸಿದರು. ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾಗಿರಿಯ ಸುಂದರಿ ಆಳ್ವ ಆವರಣದ ಕೆ.ವಿ.ಸುಬ್ಬಣ್ಣ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡ ೭೮ನೇ ಸ್ವಾತಂತ್ರ‍್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶವನ್ನು ಆರ್ಥಿಕ, ಸಾಮಾಜಿಕ, ಸಾಮುದಾಯಿಕವಾಗಿ ಎಲ್ಲರೂ ಸೇರಿ ಕಟ್ಟೋಣ’ ಎಂದ ಅವರು, ‘ವೈಯಕ್ತಿಕ ಸ್ವಾತಂತ್ರ‍್ಯದ ಉಳಿವೂ ಇಂದಿನ ಅವಶ್ಯಕತೆ. ಸ್ವಾತಂತ್ರ‍್ಯ ವನ್ನು ಯಾರದೇ ಪಾದಕ್ಕೆ ಸಮರ್ಪಿಸಬೇಡಿ’ ಎಂದು […]

ಮೂಡುಬಿದಿರೆ:-ಭಾರತ ದೇಶದಲ್ಲಿ ಜನಿಸಿರುವುದೇ ನಮ್ಮೆಲ್ಲರ ಭಾಗ್ಯ ಭಾರತ ಪುಣ್ಯ ಭೂಮಿ. ೭೮ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವ ನಾವೆಲ್ಲರೂ ಸ್ವಾತಂತ್ರö್ಯಕ್ಕಾಗಿ ಮಡಿದ ಲಕ್ಷಾಂತರ ವೀರರ ಸ್ಮರಣೆಯನ್ನು ಮಾಡಿಕೊಳ್ಳುತ್ತಾ ತಾಯಿ ಭಾರತಿಗೆ, ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಆಕೆಯ ಕೀರ್ತಿಯನ್ನು ಜಗದಗಲಕ್ಕೆ ತಲುಪಿಸುವ ಅತ್ಯಂತ ಮಹತ್ವದ ದಿನ ಇದಾಗಿದೆ. ಪ್ರತಿಯೊಬ್ಬರ ಮನಸಿನಲ್ಲಿ ತಿರಂಗ ಸದಾ ಹಾರುತ್ತಿರಲಿ ಎಂದು ಮೂಡುಬಿದಿರೆ-ಮುಲ್ಕಿ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು. ಅವರು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ೭೮ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದರು. […]

ಬದ್ರಿಯಾ ಜುಮ್ಮಾ ಮಸೀದಿ ಗಂಟಾಲ್ಕಟ್ಟೆ ಹಾಗೂ ಖಿಳ್ರಿಯ್ಯ ಮಸೀದಿ ನೀರಳಿಕೆ ಆಶ್ರಯದಲ್ಲಿ 78ನೇ ಸ್ವಾತಂತ್ರೋತ್ಸವ ಕಾರ್ಯಕ್ರಮ ನಡೆಯಿತು ಗಂಟಾಲ್ ಕಟ್ಟೆ ಖತಿಬಾರದ ಬಸೀರ್ ದಾರಿಮಿ, ನೀರಳಿಕೆ ಸದರ್ ಉಸ್ತಾದ್ ಅಬೂಬಕ್ಕರ್ ಫೈಝಿ, ಹನೀಫ್ ಯಮನಿ, ಜಮಾಲ್ ಉಸ್ತಾದ್ ಶರೀಫ್ ಉಸ್ತಾದ್ ಹಾಗೂ ಗಣ್ಯ ವ್ಯಕ್ತಿಗಳಾದ ಗಂಟಾಲ್ ಕಟ್ಟೆ ಮಸೀದಿಯ ಅಧ್ಯಕ್ಷರು ಹಾಜಿ ಹಮೀದ್ ಗೊಗುಡ್ಡೆ, ಬದ್ರುಲ್ ಹುದಾ ಯೆಂಗ್ ಮೆನ್ಸ್ ಗಂಟಾಲ್ ಕಟ್ಟೆ ಇದರ ಅಧ್ಯಕ್ಷರು ಇಲ್ಲೀಯಾಜ್ ಗಂಟಾಲ್ ಕಟ್ಟೆ, ಹಾಗೂ SKSSF ಯುನಿಟ್ ಗಂಟಾಲ್ಕಟ್ಟೆ ಇದರ […]

ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರ ಸಭಾದ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಧ್ವಜವನ್ನು ಅರಳಿಸಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಶ್ರಮಿಸಿದವರನ್ನು ಮತ್ತು ದೇಹವನ್ನು ತ್ಯಾಗ ಮಾಡಿದವರನ್ನು ನೆನಪಿಸಿಕೊಂಡರು.ಸಮಾಜ ಮಂದರಿ ಸಭಾದ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಕಾರ್ಯದರ್ಶಿ ಸುರೇಶ್ ಪ್ರಭು ಮತ್ತು ಸದಸ್ಯರು ಈ ಸಂದರ್ಭದಲ್ಲಿದ್ದರು.

ರಾಣಿ ಅಬ್ಬಕ್ಕ ಕಿರು ಉದ್ಯಾವನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಜವನೆರ್ ಬೆದ್ರ ಫೌಂಡೇಶನ್ (ರಿ) ವತಿಯಿಂದ ಅರಮನೆ ಬಾಗಿಲಿನ ಜವನೆರ್ ಬೆದ್ರ ರಾಣಿ ಅಬ್ಬಕ್ಕ ಕಿರು ಉದ್ಯಾನವನದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮುಂಜಾನೆ ನಡೆಯಿತು. ಚೌಟ ಮನೆತನದ ಕುಲದೀಪ್ ಎಂ , ಮಾಜಿ ಯೋಧ ಸುಬೇದಾರ್ ಮೇಜರ್ ರಾಜೇಂದ್ರ ಜಿ ,ರಾಣಿ ಅಬ್ಬಕ್ಕನ ಪುತ್ತಲಿಗೆ ಪುಷ್ಪಾರ್ಚನೆ ಮಾಡಿ ಧ್ವಜಾರೋಹಣ ನೆರವೇರಿಸಿದರು. ಸಂಘಟನೆಯ ಅಧ್ಯಕ್ಷ ಶ್ರೀ ಅಮರಕೋಟೆ , ಕಾರ್ಯದರ್ಶಿ ಶ್ರೀದಿನೇಶ್ ನಾಯಕ್, ಸಂಚಾಲಕ ಶ್ರೀನಾರಾಯಣ ಪಡುಮಲೆ , ಪ್ರಮುಖರಾದ ರಂಜಿತ್ […]

ಪೊಲೀಸ್ ಇಲಾಖೆಯ ದಕ್ಷ ಸೇವೆಗಾಗಿ ನೀಡಲ್ಪಡುವ ಮುಖ್ಯಮಂತ್ರಿ ಪದಕಕ್ಕೆ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರು ಭಾಜನರಾಗಿದ್ದಾರೆ. ರಾಜ್ಯದ ಸುಮಾರು 126 ಮಂದಿ ಪೊಲೀಸ್ ಅಧಿಕಾರಿಗಳು 2023 ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದು ಅದರಲ್ಲಿ ಸಂದೇಶ್ ಪಿ.ಜಿ.ಅವರೂ ಇದ್ದಾರೆ. ದ.ಕ ಹಾಗೂ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿರುವ ಸಂದೇಶ್ ಅವರು ತಮ್ಮ ಡೇರಿಂಗ್ ಮೂಲಕ ನಿಷ್ಠಾವಂತ ಅಧಿಕಾರಿಯಾಗಿ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ಗಮನಸೆಳೆದಿದ್ದಾರೆ. ಪ್ರಸ್ತುತ ಅವರು […]

ಮೂಡಬಿದಿರೆ: 14.8.24 ರಂದು ನಡೆದ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು. ಪ್ರತ್ಯೇಕವಾಗಿ, ಇವತ್ತಿನ ಕಾರ್ಯಕ್ರಮವು ಲಯನ್ ರೋನಾಲ್ಡ್ Cardoza ರವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನೆರವೇರಿಸಲಾಯಿತು. ದಕ್ಷಿಣ ಕನ್ನಡದ ಮೂಡಬಿದ್ರಿಯ ನಡ್ಯೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ, ಸ್ವಾತಂತ್ರ್ಯ ದಿನದ ಅಂಗವಾಗಿ, ಟೀಶರ್ಟ್, ಟೈ, ಐ ಡಿ, ಬೆಲ್ಟ್ ಸೇರಿದಂತೆ ಸುಮಾರು 5800 ರೂಪಾಯಿ ವೆಚ್ಚದ ಕೊಡುಗೆಯನ್ನು ನೀಡಲಾಯಿತು. ಈ ಸಂಧರ್ಭದಲ್ಲಿ, ಲಯನ್ ರೋನಾಲ್ಡ್ ಕಾರ್ಡೋಜಾ ರವರಿಗೆ ವಿಶೇಷ ಧನ್ಯವಾದಗಳು. ಹಾಗೂ, ಲಯನ್ […]

ಮೂಡುಬಿದಿರೆ: ಗಾಳಿ-ಮಳೆಗೆ ಇಂದೋ ನಾಳೆಯೋ ಕುಸಿದು ಬೀಳಲಿದ್ದ ಒಂಟಿ ಮಹಿಳೆಯ ಮನೆಯೊಂದಕೆ ಪಂಚಾಯತ್ ಉಪಾಧ್ಯಕ್ಷರು ಮತ್ತು ದಾನಿಗಳು ಸೇರಿ ಆ ಮನೆಗೆ ಕಾಯಕಲ್ಪ ನೀಡಿ ಮಾನವೀಯತೆ ಮೆರೆದಿದ್ದಾರೆ. ಪುತ್ತಿಗೆ ಗ್ರಾ.ಪಂಚಾಯತ್ ವ್ಯಾಪ್ತಿಯ ಗುಂಡ್ಯಡ್ಕ ಫಾಲ್ಸ್ ಬಳಿಯ ನಿವಾಸಿ ದಿ.ಸೀತಾರಾಮ ಆಚಾರ್ಯ ಅವರ ಪುತ್ರಿ ರೇವತಿಯಾಗಿದ್ದು ತಂದೆ-ತಾಯಿಯ ಮರಣ ನಂತರ ಒಬ್ಬರೇ ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದರು.ಇತ್ತೀಚೆಗೆ ಸುರಿದ ಭಾರೀ ಮಳೆಗಾಳಿಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದಿದ್ದಲ್ಲದೆ ಹೆಂಚು ಹಾರಿ ಹೋಗಿತ್ತು. ತನ್ನ ಮನೆಯ ಪರಿಸ್ಥಿತಿಯನ್ನು ಕಂಡು ಕಂಗಾಲಾಗಿದ್ದ ರೇವತಿ […]