



ಮೂಡುಬಿದಿರೆ: ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಅಂಗವಾಗಿ ಮೂಡುಬಿದಿರೆಯ ನಾರಾಯಣ ಗುರು ಪ್ರತಿಷ್ಠಾನ(ರಿ)ದ ವತಿಯಿಂದ ಸಮಾಜ ಸೇವಕ, ಸ್ಪೂರ್ತಿ ವಿಶೇಷ ಶಾಲೆಯ ಸ್ಥಾಪಕ ಪ್ರಕಾಶ್ ಜೆ.ಶೆಟ್ಟಿಗಾರ್ ಅವರಿಗೆ ‘ನಾರಾಯಣ ಗುರು ಪ್ರಶಸ್ತಿ-2024’ನ್ನು ನೀಡಿ ಗೌರವಿಸಿದೆ.ಸಂಸ್ಥೆಯು ಸ್ಪೂರ್ತಿ ವಿಶೇಷ ಶಾಲೆಗೆ ದೇಣಿಗೆಯನ್ನು ನೀಡಿದೆ.ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಪ್ರತಿಷ್ಠಾನದ ಅಧ್ಯಕ್ಷ ಶಿವಾನಂದ ಶಾಂತಿ, ಕಾರ್ಯದರ್ಶಿ ಮೇಘರಾಣಿ, ಸುರೇಶ್ ಅಂಚನ್ , ಪ್ರದೀಪ್ ಭಟ್, ಹರೀಶ್, ರಮೇಶ್ ಈ ಸಂದರ್ಭದಲ್ಲಿದ್ದರು.

ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.) ಅಮನ ಬೆಟ್ಟು40ನೇ ಸೇವಾ ಯೋಜನೆ ರೂ 10,000 ಸಹಾಯಧನವನ್ನು ಅನಾರೋಗ್ಯ ಪೀಡಿತೆ ಪ್ರಾಂತ್ಯ ಪರಿಸರದ ರೋಜಲಿನ್ ಡಿ. ಸೋಜಾ ಎಂಬವರಿಗೆ ಸಮಾಜ ಮಂದಿರದಲ್ಲಿ ಹಸ್ತಾಂತರಿಸಿತು. ಮೂಡುಬಿದ್ರಿ ತಾಲೂಕಿನ ಹಜಂಕಾಲ ಬೆಟ್ಟು ಪ್ರಾಂತ್ಯ ಪರಿಸರದ ರೋಜಲಿನ್ ಡಿ. ಸೋಜಾ ಎಂಬವರಿಗೆ 35ವರ್ಷ ದ ಹಿಂದೆ ವಿಷದ ಹಾವು ಕಚ್ಚಿದ ಪರಿಣಾಮ ವಾಗಿ ಅವರ ಗಾಯ ಗುಣವಾಗದೆ ಈಗಲೂ ಖಾಸಗಿ ಆಸ್ಪತ್ರೆಯಲ್ಲಿ 2 ದಿನಕ್ಕೊಮ್ಮೆ ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.ಹಾಗೂ ಅವರ […]

ಮೂಡುಬಿದಿರೆ ಪುರಸಭೆ ಚುನಾವಣೆ: ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕುತೂಹಲ ತೀವ್ರ ಮೂಡುಬಿದಿರೆ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಗೊಂಡಿದ್ದು, ಇವುಗಳಿಗಾಗಿ ನಾಳೆ (ಚುನಾವಣೆ ದಿನಾಂಕ) ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ (ಹಿಂ.ವ.ಎ) ಮಹಿಳಾ ಮೀಸಲಾತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಪ್ರಕಟವಾಗಿದೆ. 12 ಸದಸ್ಯ ಬಲ ಹೊಂದಿರುವ ಬಿಜೆಪಿ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಜಯಶ್ರೀ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಗರಾಜ್ ಪೂಜಾರಿ ಅವರ ಹೆಸರು ಕೇಳಿಬರುತ್ತಿದೆ. ಒಟ್ಟು […]

ಮೂಡುಬಿದಿರೆ: ಕರ್ನಾಟಕ ರಾಜ್ಯ ವೇಟ್ ಲಿಫ್ರ‍್ಸ್ ಸಂಸ್ಥೆ (ರಿ.) ಹಾಗೂ ಮೈಸೂರು ಜಿಲ್ಲಾ ವೇಟ್ ಲಿಫ್ರ‍್ಸ್ ಸಂಸ್ಥೆ (ರಿ.) ಇವರ ಜಂಟಿ ಆಶ್ರಯದಲ್ಲಿ ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜರುಗಿದ ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ- ಯೂತ್, ಜೂನಿಯರ್, ಸೀನಿಯರ್ ಸೇರಿದಂತೆ ಇರುವ ಒಟ್ಟು ಆರು ವಿಭಾಗಳಲ್ಲೂ ಆಳ್ವಾಸ್ ಕಾಲೇಜಿನ ಪುರುಷರ ಹಾಗೂ ಮಹಿಳೆಯರ ತಂಡ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡರು.ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಪುರುಷರ ವಿಭಾಗದಲ್ಲಿ ಒಟ್ಟು 9 ಚಿನ್ನ, 10 […]

ಲಯನ್ ಕ್ಲಬ್ ಅಲಂಗಾರ್: ಸಂತ ತೋಮಸ್ ಶಾಲೆಗೆ ಸ್ವಾತಂತ್ರ್ಯ ದಿನದ ವಿಶೇಷ ಕಂಪ್ಯೂಟರ್ ಕೊಡುಗೆ ಲಯನ್ಸ್ ಕ್ಲಬ್ ಅಲಂಗಾರ್ ವತಿಯಿಂದ, 2024 ರ ಆಗಸ್ಟ್ 14 ರಂದು, ಕೊಡುಗೈ ದಾನಿಗಳಾದ ಅಧ್ಯಕ್ಷರು ಜಾಸಿಂತಾ ಡಿಮೆಲ್ಲೊ ಹಾಗೂ ಸ್ಟೇಲ್ಲಾ ರೊಡ್ರಿಗಸ್ ರವರೊಂದಿಗೆ, ಲಯನ್ ವಿನೋದ್, ಲಯನ್ ರಾಜ ರವರ ಸಹಕಾರದೊಂದಿಗೆ, ಸಂತ ತೋಮಸ್ ಅಲಂಗಾರ್ ಶಾಲೆಗೆ ಹೊಸ ಕಂಪ್ಯೂಟರ್ ನ್ನು ಹಸ್ತಾಂತರಿಸಲಾಯಿತು. ಈ ಸೇವಾ ಕಾರ್ಯಕ್ರಮವು ದೇಶದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿತವಾಗಿತ್ತು. ಲಯನ್ ವಿನೋದ್ ರವರು ಡಿಸ್ಕೌಂಟ್ […]

ವಿದ್ಯಾಗಿರಿ: ವಿದ್ಯಾರ್ಥಿಗಳು ಶಿಸ್ತು ಹಾಗೂ ಸಮಯ ಪ್ರಜ್ಞೆಯನ್ನು ಮೈಗೂಡಿಸಿ ಕೊಂಡಾಗ ಯಶಸ್ಸು ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘ ಮತ್ತು ಮಹಿಳಾ ಕಲ್ಯಾಣ ಸಂಘದ ಉದ್ಘಾಟನೆ ಹಾಗೂ ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಸ್ಪಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಋಣಾತ್ಮಕ ಚಿಂತೆಯನ್ನು ಬಿಡಬೇಕು. ಭಾವನಾತ್ಮಕ ವಿಷಯಗಳಿಗೆ ಮಹತ್ವ ನೀಡಬಾರದು. ದೈನಂದಿನ ಬದುಕಿನಲ್ಲಿ ಶೈಕ್ಷಣಿಕವಾಗಿ ಪರಿಶ್ರಮ ಹಾಕಬೇಕು. ವಾಣಿಜ್ಯ ಶಿಕ್ಷಣಕ್ಕೆ […]

ಮೂಡುಬಿದಿರೆ : ಬಲಿಷ್ಠ ಭಾರತ ನಿರ್ಮಾಣ ಸಶಕ್ತ ವಿದ್ಯಾರ್ಥಿಸಮುದಾಯದ ದೃಢ ಸಂಕಲ್ಪದಿAದ ಸಾಧ್ಯ. ಬಲಿಷ್ಠ ವಿದ್ಯಾರ್ಥಿಸಮುದಾಯದ ಕಲ್ಪನೆ ರಾಷ್ಟçಭಕ್ತಿಯ ಬದ್ಧತೆಯುಳ್ಳಶಿಕ್ಷಣ ಸಂಸ್ಥೆಯಿAದ ಸಾಕಾರಗೊಳ್ಳುತ್ತದೆ. ಪ್ರಸ್ತುತಕಾಲಘಟ್ಟದಲ್ಲಿ ಶಿಕ್ಷಣ ಸಂಸ್ಥೆಯ ಸ್ಥಾಪಕರು ನಿಜವಾದದೇಶಭಕ್ತರು ಎಂದು ಕರ್ನಾಟಕ ವಿಧಾನಸಭೆಯಸಭಾಧ್ಯಕ್ಷರಾದ ಶ್ರೀ ಯು ಟಿ ಖಾದರ್ ಸ್ವಾತಂತ್ರೋತ್ಸವದಸAದೇಶ ನೀಡಿದರು. ಅವರು ಮೂಡುಬಿದಿರೆ ಎಕ್ಸಲೆಂಟ್ ಸಮೂಹಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸ್ವಾತಂತ್ರೋತ್ಸವದ ಶುಭಸಂದರ್ಭದಲ್ಲಿ ನಡೆದ ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ ಮತ್ತುವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿಭಾಗವಹಿಸಿ ಮಾತನಾಡಿದರು. ಭಾರತ ಹಿಂದಿನಿAದಲೂ ಮಾನವೀಯತೆ,ಸಂಸ್ಕೃತಿ, ಮೌಲ್ಯಯುತ ಜೀವನಕ್ಕೆ ಆದರ್ಶವಾದ […]

ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನವಯುಗ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿ.,ಮಂಗಳೂರು ಇವರ ವತಿಯಿಂದ ಬೋಂದೆಲ್ ನ ಸ್ನೇಹದೀಪ ಆಶ್ರಮಕ್ಕೆ ಭೇಟಿನೀಡಿ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ, ಶ್ರೀ ಚೇತನ್ ಕುಮಾರ್ ಬಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ನಿತಿನ್ ಕುಮಾರ್ ಶೆಟ್ಟಿ, ಅಭಿವೃದ್ಧಿ ವ್ಯವಸ್ಥಾಪಕರಾದ ಶ್ರೀ ಶರತ್ ಕುಮಾರ್ ಶೆಟ್ಟಿ, ಶಾಖಾ ವ್ಯವಸ್ಥಾಪಕರಾದ ಶ್ರೀ ರೊನಾಲ್ಡ್ ಜೆರಾಲ್ಡ್ ಫೆರ್ನಾಂಡಿಸ್, ನಿರ್ದೇಶಕರುಗಳಾದ ಶ್ರೀಮತಿ ರಶ್ಮಿ ಮರಿಯಾ ಡಿಸೋಜ, ಶ್ರೀ ಏರನ್ ಡಿ ಎಸ್ […]

ಅಲ್ ಮದ್ರಸತುಲ್ ಮಹಮ್ಮದೀಯ ಮೂಡಬಿದ್ರೆ ಇದರ ವತಿಯಿಂದ 78 ನೇ ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವು ಬೆಳಿಗ್ಗೆ ಗಂಟೆ 7:00 ಸರಿಯಾಗಿ ಮೂಡುಬಿದಿರೆಯ ಲಾಡಿ ಜುಮಾ ಮಸೀದಿ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮೂಡುಬಿದ್ರೆ ಟೌನ್ ಜುಮಾ ಮಸೀದಿ ಖತೀಬರಾದ ಬಹು. ಅಬೂಬಕ್ಕರ್ ಸಿದ್ದೀಕ್ ದಾರಿಮಿ ಪ್ರಾರ್ಥನೆಗೈದರು.ಧ್ವಜಾರೋಹಣವನ್ನು ಮೂಡುಬಿದ್ರೆ ಟೌನ್ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ (ಅಬ್ಬುವಾಕ) ನೆರೆವೇರಿಸಿದರು. ಮದ್ರಸ ಮುಖ್ಯೋಪಾಧ್ಯಾಯರಾದ ಬಹು. ರಫೀಕ್ ದಾರಿಮಿ ಮೂಡಬಿದ್ರೆ ಸ್ವಾಗತಿಸಿ, ಲಾಡಿ ಜುಮಾ ಮಸೀದಿ ಖತೀಬರಾದ ಬಹು. ಫಾಯಿಝ್ ಫೈಝಿ […]

ಜೈನ ಪದವಿಪೂರ್ವ ಕಾಲೇಜಿನಲ್ಲಿ 78ನೆಯ ಸ್ವಾತಂತ್ರ್ಯೋತ್ಸವವನ್ನು ಪ್ರಾಂಶುಪಾಲರಾದ ಡಾ. ಪ್ರಭಾತ್ ಬಲ್ನಾಡು ಇವರು ಧ್ವಜಾರೋಹಣ ಮಾಡುವುದರೊಂದಿಗೆ ಪ್ರಾರಂಭಿಸಲಾಯಿತು.ಸಮೃದ್ಧ ಭಾರತದ ಕನಸು ನನಸಾಗಲಿಆ ಮೂಲಕ ತ್ಯಾಗ ಬಲಿದಾನಗಳ ಹಿಂದಿನ ನಿರೀಕ್ಷೆಗಳು ಫಲ ನೀಡಲಿ ಎಂಬುದಾಗಿ ಸ್ವಾತಂತ್ರ್ಯೋತ್ಸವದ ಸಂದೇಶವನ್ನು ನೀಡಿದರುನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶ್ರೀಮತಿ ಚೇತನ ರಾಜೇಂದ್ರ ಹೆಗಡೆಯವರು ಸ್ವಾತಂತ್ರ್ಯ ಪಡೆದು 77 ವರ್ಷಗಳು ಕಳೆದ ಈ ಸಂದರ್ಭದಲ್ಲಿ ನೈತಿಕ ಮೌಲ್ಯಗಳ ಅಧಪತನದತ್ತ ವಿದ್ಯಾರ್ಥಿಗಳ ಗಮನ ಸೆಳೆದರು ..ಭವ್ಯ ಭಾರತದ ಮುಂದಿನ ಪ್ರಜೆಗಳಾಗಿರುವ ವಿದ್ಯಾರ್ಥಿಗಳು ತಮ್ಮ […]