



ಮೂಡುಬಿದಿರೆ: ತಾಲೂಕಿನ ಇತಿಹಾಸ ಪ್ರಸಿದ್ಧ ಹದಿನೆಂಟು ಮಾಗಣೆಗಳ ಒಡೆಯ , ಚೌಟರ ಸೀಮೆಯ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥ ದೇವಸ್ಥಾನದ ಪುನರ್ ಪ್ರತಿಷ್ಠಾ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ಪುತ್ತಿಗೆ ದೇಗುಲದಲ್ಲಿ ಬ್ರಹ್ಮಕಲಶದ ಲೋಗೋ ಹಾಗೂ ಭಿತ್ತಿಪತ್ರವನ್ನು ಹಿರಿಯ ಕರ ಸೇವಕರಾದ ಗಂಗಯ್ಯ ಗೌಡ ಪಾದೆಮನೆ ಹಾಗೂ ವಿಠ್ಠಲ ಗೌಡ ಪುತ್ತಿಗೆ ಬೀಡು ಇವರು ಬಿಡುಗಡೆಗೊಳಿಸಿದರು.ಮಾಜಿ ಸಚಿವ ಅಭಯಚಂದ್ರ ಜೈನ್, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿ ಶ್ರೀಪತಿ ಭಟ್, ದೇವಸ್ಥಾನದ ಆಡಳಿತ ಮೋಕ್ತೆಸರ ಚೌಟರ ಅರಮನೆಯ ಕುಲದೀಪ್ ಎಂ […]

ಮೂಡುಬಿದಿರೆ: ‘ಆಧುನಿಕ ಜಗತ್ತಿನಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಅಗತ್ಯ’ ಎಂದು ಭಾರತ ಸರ್ಕಾರದ ಆಯುಷ್ ಸಚಿವಾಲಯದ ನಿರ್ದೇಶಕ ಡಾ. ರಾಘವೇಂದ್ರ ರಾವ್ ಹೇಳಿದರು.ಆಳ್ವಾಸ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಕರಿಗಾಗಿ ಮಂಗಳವಾರ ನಡೆದ ಆರು ದಿನಗಳ ರಾಷ್ಟ್ರೀಯ ಮಟ್ಟದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಕಳೆದ ಹಲವು ದಶಕಗಳಿಂದ ಅಸಾಂಕ್ರಾಮಿಕ ರೋಗಗಳು ಇಡೀ ಜಗತ್ತಿನಲ್ಲಿ ವ್ಯಾಪಕವಾಗಿ ಹರಡುತ್ತಿರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಯೋಗ ಮತ್ತು ಪ್ರಕೃತಿ […]

ಉಡುಪಿ: ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಸೇನಾ ವಾಹನ ಅಪಘಾತದಲ್ಲಿ ಮೃತಪಟ್ಟ ಐವರ ಪೈಕಿ ಕರ್ನಾಟಕದ ಕುಂದಾಪುರ ತಾಲೂಕಿನ ಬೀಜಾಡಿಯವರಾದ ಯೋಧ ಅನೂಪ್ ಪಾರ್ಥಿವ ಶರೀರ ಉಡುಪಿಗೆ ಆಗಮಿಸಿದೆ.ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹಾಗೂ ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸೇನಾಧಿಕಾರಿಗಳಿಂದ ಅನೂಪ್ ಪಾರ್ಥಿವ ಶರೀರ ಪಡೆದು ಅಂತಿಮ ನಮನ ಸಲ್ಲಿಸಿದರು. ಬೀಜಾಡಿ ಪಡು ಸರ್ಕಾರಿ ಶಾಲಾ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಸಿದ್ಧತೆ ನಡೆದಿದೆ. ಬೀಜಾಡಿ ಕಡಲ ಕಿನಾರೆಯಲ್ಲಿ ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ […]

ಮೂಡುಬಿದಿರೆ: ಪ್ರಾಚೀನ ಮತ್ತು ಆಧುನಿಕ ವೈದ್ಯಕೀಯ ಪದ್ಧತಿಗಳಲ್ಲಿ ಹೃದಯಕ್ಕೆ ಕೇಂದ್ರ ಸ್ಥಾನವನ್ನು ನೀಡಲಾಗಿದೆ ಎಂದು ಆಳ್ವಾಸ್ ಫಾರ್ಮಾಸಿ ಕಾಲೇಜಿನ ಪ್ರಾಂಶುಪಾಲ ಡಾ. ಎಮ್. ಮಂಜುನಾಥ್ ಸೆಟ್ಟಿ ಹೇಳಿದರು.ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜುವತಿಯಿಂದ ಶನಿವಾರ ನಡೆದ ‘ಜ್ಞಾನಚಕ್ಷು-2024′- ‘ಈಸಿಜಿಯ ಮೂಲಭೂತ ಅಂಶಗಳು ಹಾಗೂ ಅದರ ವ್ಯಾಖ್ಯಾನಗಳು’ ವಿಷಯದ ರಾಷ್ಟ್ರ ಮಟ್ಟದ ಕಾರ‍್ಯಗಾರದಲ್ಲಿ ಮಾತನಾಡಿದರು.ಆಯುರ್ವೇದದಲ್ಲಿ ಹೃದಯವನ್ನು ಪ್ರಜ್ಞೆ ಮತ್ತು ಜೀವಿಯ ಪ್ರಮುಖ ಅಂಗವೆಂದು ಪರಿಗಣಿಸಲಾಗಿದೆ. ಆಯುರ್ವೇದ ತಜ್ಞರಿಗೆ ಹೃದಯದ ಬಗ್ಗೆ ಹೆಚ್ಚಿನ ಜ್ಞಾನಗಳಿಸಲು ಎಲೆಕ್ಟ್ರೋಕಾರ್ಡಿಯೋಗ್ರಫಿ ಅಥವಾ ಇಸಿಜಿ ಉಪಯುಕ್ತವಾಗಿದೆ. 1901ರಲ್ಲಿ […]

ಮೂಡುಬಿದಿರೆ :ವಿದ್ಯೆ ಸಾರ್ಥಕತೆಯ ಗುರಿಯನ್ನು ಹೊಂದಿರಬೇಕು. ಮನೆ ಮತ್ತು ಶಾಲೆಯ ವಾತಾವರಣ ಪೂರಕವಾಗಿದ್ದರೆ ಮಕ್ಕಳು ಸಮಾಜಕ್ಕೆ ಮತ್ತು ಊರಿಗೆ ಉತ್ತಮ ಹೆಸರು ತರಲು ಸಾಧ್ಯವಾಗುತ್ತದೆ ಎಂದು ವೈದಿಕ ಗುರುರಾಜ ಭಟ್ ಹೇಳಿದರು.ಅವರು ಶನಿವಾರ ದ.ಕ. ಜಿ.ಪಂ.ಸ.ಹಿ. ಪ್ರಾಥಮಿಕ ಶಾಲೆ ನೀರ್ಕೆರೆ, ಪ್ರತಿಭಾ ಪುರಸ್ಕಾರ ಸಮಿತಿ, ಹಳೆವಿದ್ಯಾರ್ಥಿಗಳ ಸಂಘ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಕ್ಷರ ಮಾತೆ ಸಾವಿತ್ರಿ ಬಾಯಿ ಪುಲೆ’ ಹೆಸರಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಾಲಾ ಮುಖ್ಯಶಿಕ್ಷಕಿ ಯಮುನಾ […]

ಮೂಡುಬಿದಿರೆ: ಕಲ್ಲಮುಂಡ್ಕೂರಿನ ಶ್ರೀ ಮಂಜುಶ್ರೀ ಭಜನಾ ಮಂಡಳಿ ಕಳಸಬೈಲು ಇದರ ೧೫ ನೇ ವರ್ಷದ ಭಜನಾ ಮಂಗಲೋತ್ಸವವು ಡಿಸೆಂಬರ್ ೨೬ ಹಾಗೂ ೨೭ ರಂದು ಮನೆ ಮನೆ ಭಜನೆ ನಡೆಯಲಿದ್ದು, ಡಿಸೆಂಬರ್ ೨೮ ಶನಿವಾರದಂದು ಭಜನಾ ಮಂಗಲೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಮಂಜುಶ್ರೀ ಭಜನಾ ಮಂಡಳಿ ಕಳಸಬೈಲು ಬಾನಂಗಡಿ , ಕಲ್ಲಮುಂಡ್ಕೂರು ಪ್ರಕಟಣೆಯಲ್ಲಿ ತಿಳಿಸಿದೆ.

ಕಾಪು:ರಾಯಲ್ ಗ್ಲೀನ್ ಕೋ ಆರ್ಡಿನೇಷನ್ ಇದರ ಪ್ರಾಯೋಜಕತ್ವದಲ್ಲಿ ಸೌಹಾರ್ದ ಮೂಡುಬಿದಿರೆ ಇದರ ಸಂಯೋಜನೆ ಯೊಂದಿಗೆ ಕಾಪುದ ಅಹಮದಿ ಮೊಹಲ್ಲಾದ ಪಕೀರ್ನಕಟ್ಟೆಯ ಜಾಮಿಯಾ ಮಸೀದಿಯಲ್ಲಿ ಉಚಿತ ಎಲ್ ಇಡಿ ಬಲ್ಬ್ ಜೋಡಿಸುವ ಸ್ವಉದ್ಯೋಗ ತರಬೇತಿ ಶಿಬಿರವುಗುರುವಾರ ನಡೆಯಿತು.ಈ ಉಚಿತ ತರಬೇತಿಯಲ್ಲಿ 70ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ . ಎಲ್ಇಡಿ ಮತ್ತು ಎಸಿ ಡಿಸಿ ಬಲ್ಬ್ ಜೋಡಿಸುವ ತರಬೇತಿ ಪಡೆದರುಸ್ವಯಂಸೇವಾ ತಂಡದ ಮಹಮ್ಮದ್ ಶಾಕಿರ್, ಮಹಮ್ಮದ್ ಶಾಫಿ ಎಲ್ ಇಡಿ ಬಲ್ಬ್ ಜೋಡಣೆ ಯ ತರಬೇತಿ ನೀಡಿದರು.ಈ ಸಂದರ್ಭದಲ್ಲಿ ರಾಯಲ್ […]

ಸದ್ಯಕ್ಕೆ ತುಳುನಾಡಿನಾದ್ಯಂತ ಬರೀ ಸದ್ದು ಮಾಡುತ್ತಿರುವ ದಸ್ಕತ್ ಸಿನಿಮಾ ಎಲ್ಲಾರ ಮನೆಮನದಲ್ಲಿ ಗುನುಗುಟ್ಟುತ್ತಿದೆ. ವಿಭಿನ್ನ ಕಥೆ, ಛಾಯಾಗ್ರಹಣ, ಸಂಗೀತ ನಟನೆಯನ್ನು ಹೊಂದಿರುವ ನೈಜ್ಯ ಶೈಲಿಯಲ್ಲಿ ಸಿನಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಅತ್ಯದ್ಭುತವಾಗಿ ಕಂಡು ಬರುವ ಪಾತ್ರ ಶೇಖರ ಎಂಬ ಕಟ್ಟುಮಸ್ತು ದೇಹ ಹೊಂದಿರುವ ಯುವಕನ ಪಾತ್ರ. ಈ ಪಾತ್ರ ಸಿನಿಪ್ರಿಯರ ಗಮನ ಸೆಳೆದಿರುವುದು ಸುಳ್ಳಾಲ್ಲ. ಆ ಪಾತ್ರಕ್ಕೆ ಜೀವ ತುಂಬಿದವರು ಒಂದು ಹಳ್ಳಿ ಪ್ರತಿಭೆ ದೀಕ್ಷಿತ್ ಅಂಡಿಂಜೆ. ಇವರು ಮೂಲತಃ ಬೆಳ್ತಂಗಡಿ ತಾಲೂಕಿನ ಅಂಡಿಂಜೆಯ ದಿ|ಸಂಜೀವ […]

ಮೂಡುಬಿದಿರೆ: ಇದು ಗೂಗಲ್ ಮಾಹಿತಿ ಸುನಾಮಿಯ ಕಾಲ, ಆದರೆ, ಶಿಕ್ಷಕರ ಸ್ಥಾನ ತುಂಬಲು ಗೂಗಲ್ ಗೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ನಮ್ಮ ತರಗತಿಯಲ್ಲಿ ಏಕೆ ಕುಳಿತುಕೊಳ್ಳಬೇಕು ಎಂದು ಶಿಕ್ಷಕರು ತಮ್ಮಲ್ಲಿ ಪ್ರಶ್ನಿಸಿಕೊಳ್ಳಬೇಕು. ಆಗ ತರಗತಿಯ ಎಲ್ಲ ವಿದ್ಯಾರ್ಥಿಗಳು ಬುದ್ಧಿವಂತರಾಗುತ್ತಾರೆ ಎಂದು ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ರಾಮಚಂದ್ರ ಸೆಟ್ಟಿ ಹೇಳಿದರು.ಆಳ್ವಾಸ್ ಪ್ರಕೃತಿಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಯೋಗ ಸಭಾಂಗಣದಲ್ಲಿ ಶಿಕ್ಷಕರಿಗಾಗಿ ನಡೆದ ಆರು ದಿನಗಳ ರಾಷ್ಟ್ರೀಯ ಮಟ್ಟದ […]

ಮೂಡುಬಿದಿರೆ:ಹದಿನೆಂಟು ಮಾಗಣೆಗಳ ಒಡೆಯ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಾಲಯಕ್ಕೆ ಕೆ.ಪಿ. ಸಿ. ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಭೇಟಿ ನೀಡಿ,ದೇವಳದ ಜೀರ್ಣೋದ್ದಾರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು, ಜೊತೆಗೆ ಉತ್ತಮ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.