Category: Mdb Live 24

  • ಡಾ. ದಾಮೋದರ ಗೌಡ ಕೆ.ಎಂ ಗೆ “ಫೆಲೋ” ಪದವಿ ಪ್ರದಾನ

    ಡಾ. ದಾಮೋದರ ಗೌಡ ಕೆ.ಎಂ ಗೆ “ಫೆಲೋ” ಪದವಿ ಪ್ರದಾನ

    ಮಂಗಳೂರು: ಡಾ. ದಾಮೋದರ ಗೌಡ ಕೆ.ಎಂ, ಫಿಸಿಯಾಲಜಿಯ ಆಸೋಸಿಯೇಟ್ ಪ್ರೊಫೆಸರ್, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ, ನಿಟ್ಟೆ ವಿಶ್ವವಿದ್ಯಾಲಯ, ಅವರಿಗೆ ಇಂಡಿಯನ್ ಅಸೋಸಿಯೇಶನ್ ಆಫ್ ಬಯೋಮೆಡಿಕಲ್ ಸೈನ್ಟಿಸ್ಟ್ಸ್ (IABMS) ನ ಕಾರ್ಯನಿರ್ವಾಹಕ ಸಮಿತಿಯಿಂದ “ಫೆಲೋ” ಪದವಿಯನ್ನು 45ನೇ ವಾರ್ಷಿಕ ಸಮ್ಮೇಳನದಲ್ಲಿ ಪ್ರದಾನ ಮಾಡಲಾಯಿತು.ಈ ಸಮ್ಮೇಳನವು ಮಂಗಳೂರು ಎ.ಜೆ. ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆಯಿತು.ಭಾರತದಾದ್ಯಂತ ಒಟ್ಟು ಆರು IABMS ಜೀವನ ಸದಸ್ಯರನ್ನು ಈ ಪದವಿಗಾಗಿ ಆಯ್ಕೆ ಮಾಡಲಾಯಿತು. ಬಯೋಮೆಡಿಕಲ್ ಸೈನ್ಸಸ್ ಕ್ಷೇತ್ರದಲ್ಲಿ ಸಂಶೋಧನಾ ಅನುಭವಗಳಲ್ಲಿ ಅತ್ಯುತ್ತಮ […]

    Continue Reading

  • ಹಳೆ  ರಸ್ತೆಯನ್ನು ಉಳಿಸಲು  ಗ್ರಾಮಸ್ಥರಿಂದ ಪ್ರತಿಭಟನೆ: ಅಂಡರ್ ಪಾಸ್  ಮಾರ್ಗ ನಿರ್ಮಾಣಕ್ಕೆ ಒತ್ತಾಯ

    ಹಳೆ  ರಸ್ತೆಯನ್ನು ಉಳಿಸಲು  ಗ್ರಾಮಸ್ಥರಿಂದ ಪ್ರತಿಭಟನೆ: ಅಂಡರ್ ಪಾಸ್  ಮಾರ್ಗ ನಿರ್ಮಾಣಕ್ಕೆ ಒತ್ತಾಯ

    ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಸಂದರ್ಭ ಗ್ದಾಮಸ್ಥರು ಓಡಾಡುವ ಸಂಪರ್ಕ  ರಸ್ತೆಯನ್ನು ಮುಚ್ಚದೆ ಗ್ರಾಮೀಣ ರಸ್ತೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ  ಅಲ೦ಗಾರು ಪೋಯ್ಯೆದಪಲ್ಕೆ, ಕಾನ, ಅ೦ಬೂರಿ, ಮ೦ಜನಕಟ್ಟೆ,ಬೆಳುವಾಯಿ, ಗ್ರಾಮದ ಗ್ರಾಮಸ್ಥರು ಬುಧವಾರ ಪೋಯ್ಯದಪಲ್ಕೆ  ಎಂಬಲ್ಲಿ ಪ್ರತಿಭಟನೆ ನಡೆಸಿದರು.ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪ್ರತಿಭಟನೆಯನ್ನುದ್ದೇಶಿಸಿ   ಮಾತನಾಡಿ, ಇಂತಹ ಫೈ ಓವರ್‌ಗಳ ಕಾಮಗಾರಿಗಳು ಜನರಿಗೆ ತೊಂದರೆಯಾಗುತ್ತಿವೆ. ಈ ಮಾರ್ಗಕ್ಕೆ ಅಂಡರ್‌ಪಾಸ್‌ ಮಾರ್ಗವನ್ನಾದರೂ ನಿರ್ಮಿಸಿ ಕೊಡಬೇಕು. ಸಂಪೂರ್ಣವಾಗಿ ಈ ರಸ್ತೆ ಮುಚ್ಚಬಾರದು. ಇಂತಹ ಅನ್ಯಾಯದ ವಿರುದ್ಧ ಹೋರಾಡಲು ಮೂಡುಬಿದಿರೆಯ ಜನತೆ […]

    Continue Reading

  • ಲಿಂಗತ್ವಾಧಾರಿತ ದೌರ್ಜನ್ಯ ತಡೆ ಹಾಗೂ ಮಹಿಳಾ ಸಹಾಯವಾಣಿ ಕುರಿತು ಅರಿವು ಕಾರ್ಯಕ್ರಮ

    ಲಿಂಗತ್ವಾಧಾರಿತ ದೌರ್ಜನ್ಯ ತಡೆ ಹಾಗೂ ಮಹಿಳಾ ಸಹಾಯವಾಣಿ ಕುರಿತು ಅರಿವು ಕಾರ್ಯಕ್ರಮ

    ಮೂಡುಬಿದಿರೆ: ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ಸಖಿ ಒನ್‌ಸ್ಟಾಪ್ ಸೆಂಟರ್ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು, ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್‌ಟೌನ್, ಇನ್ನರ್‌ವೀಲ್ ಕ್ಲಬ್ ಮೂಡುಬಿದಿರೆ ಇವರ ಸಹಭಾಗಿತ್ವದಲ್ಲಿ ಲಿಂಗತ್ವಾಧಾರಿತ ದೌರ್ಜನ್ಯ ತಡೆ ಹಾಗೂ ಮಹಿಳಾ ಸಹಾಯವಾಣಿ ಕುರಿತು ಅರಿವು ಕಾರ್ಯಕ್ರಮವನ್ನು ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ ಬಿಂಧ್ಯಾ ಶರತ್ ಉದ್ಘಾಟಿಸಿದರು.ಸಂಪನ್ಮೂಲ ವ್ಯಕ್ತಿಯಾದ ಸಖಿ ಒನ್ ಸ್ಟಾಪ್ ಸೆಂಟರ್‌ನ ಆಡಳಿತಾಧಿಕಾರಿ […]

    Continue Reading

  • ಭಜನಾ ಪ್ರಿಯೆ ಇರುವೈಲು ಶ್ರೀ ದೇವಿಯ ೭೫ ನೇ ಭಜನಾ ಮಂಗಲೋತ್ಸವದ ನಗರ ಭಜನೆ ಆರಂಭ

    ಭಜನಾ ಪ್ರಿಯೆ ಇರುವೈಲು ಶ್ರೀ ದೇವಿಯ ೭೫ ನೇ ಭಜನಾ ಮಂಗಲೋತ್ಸವದ ನಗರ ಭಜನೆ ಆರಂಭ

    ಮೂಡುಬಿದಿರೆ: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಶ್ರೀ ಕ್ಷೇತ್ರ ಇರುವೈಲು ಇದರ ೭೫ ನೇ ಭಜನಾ ಮಂಗಲೋತ್ಸವದ ನಗರ ಭಜನೆಯು ಆದಿತ್ಯವಾರ ದೇವಿಯ ಸನ್ನಿಧಿಯಲ್ಲಿ ಪೂಜಾ ವಿಧಿ ವಿಧಾನಗಳನ್ನು ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ ನೇರವೇರಿಸಿದರು. ಕೈಯಲ್ಲಿ ತಾಳ ಹಿಡಿದು ಭಜಕರೊಡಗೂಡಿ ಭಜನೆಯನ್ನು ಹಾಡಿ ೭೫ ರ ಸಂಭ್ರಮದ ಭಜನಾ ಮಂಗಲೋತ್ಸವದ ಮನೆ ಮನೆ ನಗರ ಭಜನೆಯನ್ನು ದೇವಿಯ ಸನ್ನಿಧಿಯಿಂದ  ಪ್ರಾರಂಭಿಸಿದರು.ಭಜನಾ ಪ್ರಿಯೇ ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಧನು ಸಂಕ್ರಮಣದಿಂದ ಆರಂಭಗೊಂಡು ಮಕರ ಸಂಕ್ರಮಣದವರೆಗೆ […]

    Continue Reading

  • ಆಳ್ವಾಸ್ ನಲ್ಲಿ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಕೆಲವು ಪ್ರಶ್ನೆಗಳು ಹಾಗೂ ವಿಚಾರ ಶಿಬಿರ -೨೦೨೪ ಉದ್ಘಾಟನಾ ಸಮಾರಂಭ

    ಆಳ್ವಾಸ್ ನಲ್ಲಿ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಕೆಲವು ಪ್ರಶ್ನೆಗಳು ಹಾಗೂ ವಿಚಾರ ಶಿಬಿರ -೨೦೨೪ ಉದ್ಘಾಟನಾ ಸಮಾರಂಭ

    ಮೂಡುಬಿದಿರೆ: ಕನ್ನಡ ವಿಭಾಗ, ಆಳ್ವಾಸ್ ಕಾಲೇಜು ವಿದ್ಯಾಗಿರಿ, ಮೂಡುಬಿದಿರೆ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ   ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಮಂಗಳವಾರ  ಆಳ್ವಾಸ್ ನ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆದ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಕೆಲವು ಪ್ರಶ್ನೆಗಳು ಎಂಬ ವಿಚಾರ ಶಿಬಿರ-೨೦೨೪ ವನ್ನು ಬೆಂಗಳೂರು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ.ಡಾ.ವೂಡೇ ಪಿ.ಕೃಷ್ಣ ಅವರು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಗಾಂಧಿ ಎಂಬ ಮಹಾನ್ ಶಕ್ತಿ. ಭಾರತ ಬಿಟ್ಟು ಗಾಂಧಿ ಇಲ್ಲ. ಗಾಂಧಿ ಬಿಟ್ಟು ಭಾರತ ಇಲ್ಲ. ಭಾರತದ […]

    Continue Reading

  • ರಾಜ್ಯಮಟ್ಟದ  ಬ್ಯಾಡ್ಮಿಂಟನ್ ಚಾಂಪಿಯನ್‌ಶಿಫ್- ಆಳ್ವಾಸ್‌ಗೆ ಅವಳಿ ಪ್ರಶಸ್ತಿ

    ರಾಜ್ಯಮಟ್ಟದ  ಬ್ಯಾಡ್ಮಿಂಟನ್ ಚಾಂಪಿಯನ್‌ಶಿಫ್- ಆಳ್ವಾಸ್‌ಗೆ ಅವಳಿ ಪ್ರಶಸ್ತಿ

    ಮೂಡುಬಿದಿರೆ: ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಅಸೋಸಿಯನ್ ಹಾಗೂ ತುಮಕೂರು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಇವುಗಳ ಜಂಟಿ ಆಶ್ರಯದಲ್ಲಿ ಮಧುಗಿರಿ ಸ್ಪೋಟ್ಸ್ ಕ್ಲಬ್ ಮಧುಗಿರಿಯಲ್ಲಿ ನಡೆದ  ಕರ್ನಾಟಕ ರಾಜ್ಯಮಟ್ಟದ ಜ್ಯೂನಿಯರ ಬಾಲಕ ಹಾಗೂ ಬಾಲಕಿಯರ ಎರಡು  ವಿಭಾಗದ ಪ್ರಥಮ ಪ್ರಶಸ್ತಿ ಹಾಗೂ ಬಾಲಕಿಯರ ದ್ವಿತೀಯ ಪ್ರಶಸ್ತಿಯನ್ನು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡರು. ಬಾಲಕರ ವಿಭಾಗದ ಫೈನಲ್ಸ್ ನಲ್ಲಿ ಆಳ್ವಾಸ್ ಬಾಲಕರ ತಂಡ ಬೆಂಗಳೂರಿನ ರಾಜೇಶ್ವರಿ ಯುತ್ ಕ್ಲಬ್ (ಆರ್‌ವೈಸಿ) ತಂಡವನ್ನು 35-31 ಹಾಗೂ 35-27 […]

    Continue Reading

  • ಹದಿನೆಂಟು ಮಾಗಣೆಗಳ ಒಡೆಯ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇಗುಲಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಭೇಟಿ

    ಹದಿನೆಂಟು ಮಾಗಣೆಗಳ ಒಡೆಯ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇಗುಲಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಭೇಟಿ

    ಮೂಡುಬಿದಿರೆ : ಪುರಾಣ ಪ್ರಸಿದ್ಧ ಹದಿನೆಂಟು ಮಾಗಣೆಗಳ ಒಡೆಯ, ಚೌಟರ ಸೀಮೆಯ ಪುತ್ತಿಗೆ ಶ್ರೀ ಸೋಮನಾಥ ದೇವಾಲಯದ ನೂತನ ಜೀರ್ಣೋದ್ಧಾರ ಕಾಮಗಾರಿಯ ವೀಕ್ಷಣೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರುಆಗಮಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ಡಾ.ಡಿ. ಹೆಗ್ಗಡೆಯವರನ್ನು ದೇವಾಲಯದ ಅನುವಂಶಿಕ ಆಡಳಿತ ಮೊಕೇಸರರಾಗಿರುವ ಚೌಟರ ಅರಮನೆಯ ಕುಲದೀಪ್ ಎಂ, ಉದ್ಯಮಿ ಶ್ರೀಪತಿ ಭಟ್‌, ದೇವಾಲಯದ ಅರ್ಚಕ ಅನಂತ ಕೃಷ್ಣ ಭಟ್ ಹಾಗೂ ಮತ್ತಿತರ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಕಾಮಗಾರಿಯ ಪ್ರಗತಿ ಕಂಡು ಪೂಜ್ಯರು ಸಂತಸ ವ್ಯಕ್ತಪಡಿಸಿದರು.

    Continue Reading

  • ವಿರಾಸತ್ ವೇದಿಕೆಯಲ್ಲಿ ಚೆನ್ನೈನ ಸ್ಟೆಕೇಟೋ ಕಲಾವಿದರ ದ್ರಾವಿಡ ಸಂಗೀತ ಸ್ವರಗಳ ತಲ್ಲಣ

    ವಿರಾಸತ್ ವೇದಿಕೆಯಲ್ಲಿ ಚೆನ್ನೈನ ಸ್ಟೆಕೇಟೋ ಕಲಾವಿದರ ದ್ರಾವಿಡ ಸಂಗೀತ ಸ್ವರಗಳ ತಲ್ಲಣ

    ಮೂಡುಬಿದಿರೆ: ‘೩೦ ನೇ ಆಳ್ವಾಸ್ ವಿರಾಸತ್’ನಲ್ಲಿ ಉತ್ತರದ ಹಿಂದೂಸ್ತಾನಿ, ಪಶ್ಚಿಮದ ಗುಜರಾತಿ, ಪೂರ್ವದ ಕೋಲ್ಕತ್ತಾ ಸಂಗೀತದ ನಿನಾದ ಸವಿದ ಪ್ರೇಕ್ಷಕರಿಗೆ ಶನಿವಾರ ದಕ್ಷಿಣ ದ್ರಾವಿಡ ಸಾಹಿತ್ಯ-ಸಂಗೀತ ಲೋಕದ ಸಂಭ್ರಮ. ಕನ್ನಡ, ತಮಿಳು, ತೆಲುಗು, ಮಲೆಯಾಳ, ಸ್ವಲ್ಪ ಹಿಂದಿ ಮಿಶ್ರಣ ‘ವುಡ್’ಗಳ ಸಿನಿಮಾ ಹಾಡುಗಳ ಸಿಂಚನವು ಆಳ್ವಾಸ್ ವಿರಾಸತ್‌ನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಚೆನ್ನೈಯ ಸ್ಟೆಕೇಟೋ ಬ್ಯಾಂಡ್ ತಂಡವು ನಿರಂತರ ಅಬ್ಬರದಲ್ಲಿ ನಡೆಸಿಕೊಟ್ಟ ಸಂಗೀತ ರಸಸಂಜೆಯ ಆರಂಭದಲ್ಲಿ ವಯೋಲಿನ್ ನಲ್ಲಿ ಸಾಯಿ ರಕ್ಷಿತ್ ಅವರು […]

    Continue Reading

  • ವಿರಾಸತ್ ಸಾಂಸ್ಕೃತಿಕ ರಥ ಮರಳಿ ಸ್ವಸ್ಥಾನಕ್ಕೆ

    ವಿರಾಸತ್ ಸಾಂಸ್ಕೃತಿಕ ರಥ ಮರಳಿ ಸ್ವಸ್ಥಾನಕ್ಕೆ

    ಮೂಡುಬಿದಿರೆ: ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ, ವೇದಘೋಷಗಳ ನಿನಾದ, ಭಜನೆಗಳು, ಪುಷ್ಪ ಪಲ್ಲಕ್ಕಿಗಳು, ಪ್ರೇಕ್ಷಕರ ಜಯ ಘೋಷ ಹಾಗೂ ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ರಥ ಎಡದಿಂದ ಬಲಕ್ಕೆ ಸಂಚರಿಸಿ ಸ್ವಸ್ಥಾನಕ್ಕೆ ಮರಳಿ, ಧ್ವಜ ಅವರೋಹಣದೊಂದಿಗೆ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘೩೦ನೇ ವಿರಾಸತ್’ನ ಸಾಂಸ್ಕೃತಿಕ ಕಾರ‍್ಯಕ್ರಮಗಳಿಗೆ ಶನಿವಾರ ರಾತ್ರಿ ತೆರೆ ಬಿತ್ತು.ಲೋಕ ಮಾರ್ಗದರ್ಶಕರಾದ ರಾಮ-ಕೃಷ್ಣರ ಮೂರ್ತಿ ಪ್ರತಿಷ್ಠಾಪಿಸಿದ ಸಾಂಸ್ಕೃತಿಕ ರಥವನ್ನು ಮುಖ್ಯ ವೇದಿಕೆಯ ಮುಂಭಾಗದಲ್ಲಿ ಎಡದಿಂದ ಬಲಕ್ಕೆ ಎಳೆಯಲಾಯಿತು.ಇದಕ್ಕೂ ಮೊದಲು ಸಣ್ಣ ರಥದಲ್ಲಿ ಗಣಪತಿ, ಪಲ್ಲಕ್ಕಿಯಲ್ಲಿ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ […]

    Continue Reading

  • ಮೂಡುಬಿದಿರೆಗೆ ಸರಕಾರಿ ಬಸ್ಸು ಓಡಾಟ: ಪಟಾಕಿ ಹೊಡೆದು ಸಂಭ್ರಮಿಸಿ ಸ್ವಾಗತಿಸಿದ ಕಾಂಗ್ರೆಸ್ ಮುಖಂಡರು

    ಮೂಡುಬಿದಿರೆಗೆ ಸರಕಾರಿ ಬಸ್ಸು ಓಡಾಟ: ಪಟಾಕಿ ಹೊಡೆದು ಸಂಭ್ರಮಿಸಿ ಸ್ವಾಗತಿಸಿದ ಕಾಂಗ್ರೆಸ್ ಮುಖಂಡರು

    ಮೂಡುಬಿದಿರೆ: ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳಲ್ಲೊಂದಾದ ಶಕ್ತಿ ಯೋಜನೆಯಡಿ ಮಂಗಳೂರು-ಮೂಡುಬಿದಿರೆ- ಕಾರ್ಕಳಕ್ಕೆ ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಅನುಮೋದನೆ ದೊರಕಿ ಈಗಾಗಲೇ ಬಸ್ಸು ಸಂಚಾರ ಆರಂಭಗೊಂಡಿದ್ದು, ಇಂದು ಬೆಳಿಗ್ಗೆ ಮೂಡುಬಿದಿರೆ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಹಚ್ಚಿ , ಹಸಿರು ನಿಶಾನೆ ಹಾರಿಸುವ ಮೂಲಕ ಸ್ವಾಗತಿಸಿ ಸಂಭ್ರಮ ಪಟ್ಟರು.ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ಸ್ವಾಗತಿಸಿ ಮಾತನಾಡಿ, ರಾಮಲಿಂಗಾರೆಡ್ಡಿ, ಡಿ.ಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಭಿನಂದನೆಯನ್ನು ತಿಳಿಸಿದ ಅವರು […]

    Continue Reading