Subscriber Content
Add content here that will only be visible to your subscribers.

Add content here that will only be visible to your subscribers.


ಮೂಡುಬಿದಿರೆ: ಕೆಲವರಿಗೆ ಏನೋ ಒಂದು ಖುಷಿ ಯಾರೋ ಮಾಡಿದ ಮಗುವಿಗೆ ನಾನೇ ಅಪ್ಪ ಎಂದು ಹೇಳಿಕೊಂಡು ತಿರುಗಾಡುವ ಚಾಳಿ. ಆದ್ದರಿಂದ ಅಂತಹ ಮನಸ್ಥಿತಿಯುಳ್ಳವರನ್ನು ನಾವೇನು ಮಾಡಲು ಸಾಧ್ಯವಿಲ್ಲ. ಇದು ಜನರಿಗೆ ಸ್ಪಷ್ಟವಾಗಿ ತಿಳಿದಿದೆ. ಈ ಕೆಲಸ ಯಾರಿಂದ ಸಾಧ್ಯವಾಗಿದೆಯೇಂಬುದು, ಯಾರೋ ಒಬ್ಬ ತಾಲೂಕಿನಲ್ಲಿ ಕುಳಿತುಕೊಂಡು ನಾನೇ ಮಾಡಿದ್ದೇನೆಂದು ಹೇಳಿಕೊಂಡು ತಿರುಗಾಡಿದರೆ ಜನ ಅದನ್ನು ನಂಬಲು ತಯಾರಿಲ್ಲ. ಒಳ್ಳೆಯ ಕೆಲಸ ಮಾಡಿದ್ದು ನಾನು, ಕೆಟ್ಟ ಕೆಲಸ ಮಾಡಿದ್ದು ಇನ್ನೊಬ್ಬ ಎಂದು ಹೇಳುವ ಜನರು ಮೂರ್ಖರು ಎಂದು ಮೂಲ್ಕಿ ಮೂಡುಬಿದಿರೆ […]

ಮೂಡುಬಿದಿರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ೭೪ ನೇ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡಿದ್ದು , ಕರ್ನಾಟಕವು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಪ್ರದರ್ಶಿಸಿ, ಹಲವಾರು ಉನ್ನತ ಸ್ಥಾನಗಳನ್ನು ಪಡೆದುಕೊಂಡಿದ್ದು, ಮೊದಲ ಸ್ಥಾನವನ್ನು ಕರ್ನಾಟಕ ಪಡೆದುಕೊಂಡಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸಂಸ್ಥೆಯು ಸೇವೆಯನ್ನು ವಿಭಿನ್ನ ರೀತಿಯಲ್ಲಿ ಮಾಡುತ್ತಿರುವವರಿಗೆ ರಾಷ್ಟ್ರೀಯ ಸಂಸ್ಥೆಯು ಕೆಲವು ಪದಕಗಳನ್ನು ನೀಡಿ ಗೌರವಿಸುತ್ತಾರೆ. ಅದರಲ್ಲಿ ೨೦೨೩ ನೇ ವರ್ಷದಲ್ಲಿ ರಾಷ್ಟ್ರ ಮಟ್ಟದಲ್ಲಿ ಕೊಡ ಮಾಡುವ ಮೇಸೆಂಜರ್ ಆಫ್ ಪೀಸ್ […]

ಮೂಡುಬಿದಿರೆ: ತಾಲೂಕಿನಾದ್ಯಾಂತ ಸರಕಾರಿ ಬಸ್ಸು ಓಡಾಡಬೇಕೆಂಬುದು ಇಲ್ಲಿನ ಜನರ ಬಹುಕಾಲದ ಬೇಡಿಕೆ. ಆ ಬೇಡಿಕೆ ಇದೀಗ ಪೂರ್ಣಗೊಂಡಿದೆ. ಸಾರಿಗೆ ಇಲಾಖೆಯು ಮೂಡುಬಿದಿರೆ ,ಕಾರ್ಕಳ ಮಂಗಳೂರಿಗೆ ಬಸ್ಸು ಪ್ರಯಾಣದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.ಬೆಳಿಗ್ಗೆ 6.45 ರಿಂದ ಆರಂಭವಾಗಿ ಸಂಜೆ 6.15 ರವರೆಗೆ ಕೆಎಸ್ ಆರ್ ಟಿಸಿ ಬಸ್ಸು ಸಂಚರಿಸಲಿದೆ. ಮಂಗಳೂರಿನಿಂದ ಕೈಕಂಬ- ಎಡಪದವು- ಮೂಡುಬಿದಿರೆ- ಬೆಳುವಾಯಿ ಮಾರ್ಗವಾಗಿ ಕಾರ್ಕಳದವರೆಗೆ ಸುಮಾರು 55ಕಿ.ಮೀ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸನ್ನು ಚಲಾಯಿಸಲು ಜನರ ಬೇಡಿಕೆಯು ಯಶಸ್ವಿಯಾಗಿದೆ.ದಿನ ನಿತ್ಯ ಬಸ್ ಸಂಚಾರದ ಸಮಯದ […]

ಮೂಡುಬಿದಿರೆ: ತಾಲೂಕಿಗೆ ಸರಕಾರಿ ಬಸ್ಸು ಬೇಕೆಂದು ಇಲ್ಲಿನ ಜನರ ಬಹುಕಾಲದ ಬೇಡಿಕೆ. ಆದರೆ ಹಲವಾರು ವರುಷಗಳಿಂದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಭಾರತೀಯ ರೈತ ಸೇನೆಯು ಹಲವಾರು ಬಾರಿ ಮನವಿಯನ್ನು ಸಂಬAಧಪಟ್ಟ ಇಲಾಖೆಗೆ ನೀಡಿದರೂ ಸ್ಪಂದಿಸದೇ ಇದ್ದಾಗ ಕಾನೂನಾತ್ಮಕ ಹೋರಾಟವನ್ನು 04/03/2023 ರಂದು ಕರ್ನಾಟಕ ಲೋಕಾಯುಕ್ತ ನ್ಯಾಯಲಕ್ಕೆ ದೂರು ಅರ್ಜಿ ಸಲ್ಲಿಸಲಾಯಿತು. ಸದ್ರಿ ದೂರು ಅರ್ಜಿಯು ನ್ಯಾಯಾಲಯದ ಪ್ರಕರಣ ಸಂಖ್ಯೆ: LOK/MYS/10393/2023 ರಂತೆ ಪ್ರಕರಣ ದಾಖಲಾಗಿ, ವಿಚಾರಣೆ ನಡೆಯುತ್ತಿರುವಾಗಲೇ […]

ಮೂಡುಬಿದಿರೆ: ಆಳ್ವಾಸ್ ವಿರಾಸತ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನದ ಬಳಿಕ ಸುಧೆಯಾಗಿ ಹರಿದದ್ದು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರ ಸ್ವರ ಮಾಧುರ್ಯ.ಶ್ರೀ ರಾಗದ ಮೂಲಕ ಕಛೇರಿ ಆರಂಭಿಸಿದ ಅವರು ಮುರಲೀ ಸ್ತುತಿಸುತ್ತಾ ‘ಆನಂದ ದೇ ಮುಖ ಚಂದ್ರ ಐ ಸೇ ಚಾಂದನಿ ಸಾಂದ್ರ…’ಬಾದಲ್ ಆಯೇ ನಭಾ ಮೇ…ಯಾದ’ ಸಂಗಶ್ರೋತ್ರವಿನ ಯೋಚನಾ ಲಹರಿಗೆ ತೆರೆದುಕೊಳ್ಳುವ ಪುರಾತನ ಶ್ರೀ ರಾಗ ಹಾಡಿದ ಅವರು, ‘ ಗಾಯನ ಕೇಳುಗರಿಗೆ ಸುಲಲಿತ ಹಾಗೂ ಇಂಪಾಗಿರಬೇಕು’ ಎಂದು ಕೇಳುವುದನ್ನೂ […]

ಕಾರ್ಕಳ:ರೋಯಲ್ ಗ್ಲೇಮ್ ಕಂಪೆನಿ ಹಾಗೂ ಮೆಡಿಸಿನ್ ಹೆಲ್ಪ್ ಲೈನ್ ಕಾರ್ಕಳ ಇವುಗಳ ಜಂಟಿ ಆಶ್ರಯದಲ್ಲಿ ಕಾರ್ಕಳದ ಮದೀನ ಮಸ್ಜಿದ್ ಹಾಲ್ ನಲ್ಲಿ ಮಹಿಳೆಯರಿಗೆ ಉಚಿತ ಎಲ್ ಈ ಡಿ ಬಲ್ಬ್ ಜೋಡಣೆ ಮಾಡುವ ಸ್ವ ಉದ್ಯೋಗ ಕಾರ್ಯಕ್ರಮ ನಡೆಯಿತು.ಸುಮಾರು 60 ಕ್ಕೂ ಹೆಚ್ಚು ಮಹಿಳೆಯರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.ರೋಯಲ್ ಗ್ಲೇಮ್ ಕಂಪೆನಿ ಯ ಪದಾಧಿಕಾರಿಗಳು ಎಲ್ ಈ ಡಿ ಬಲ್ಬ್ ಜೋಡಿಸುವ ವಿಧಾನ ಮತ್ತು ಇದರ ಪ್ರಯೋಜನ ದ ಕುರಿತು ಮಾಹಿತಿಯನ್ನು ನೀಡಿದರು.ರೋಯಲ್ […]

ಮೂಡುಬಿದಿರೆ: ಮಂಗಳೂರು- ಮೂಡುಬಿದಿರೆ- ಕಾರ್ಕಳ ನಡುವೆ ಸರ್ಕಾರಿ ಬಸ್ ಬೇಕೆಂಬುವುದು ವಿದ್ಯಾರ್ಥಿಗಳೂ ಸೇರಿದಂತೆ ಸಾರ್ವಜನಿಕರ ಬೇಡಿಕೆಯಾಗಿತ್ತು. ಜನರ ಈ ಬಹುದಿನಗಳ ಬೇಡಿಕೆಯು ಇನ್ನೇನೂ ಪೂರ್ಣಗೊಂಡಿದೆ ಎಂದಾಗ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳ ನಡುವೆ ಪೋಸ್ಟರ್ ಗುದ್ದಾಟ ಸದ್ದು ಮಾಡುತ್ತಿದೆ.ಇತ್ತ ಕಡೆ ಬಿಜೆಪಿ ಪಕ್ಷವು ಸರ್ಕಾರಿ ಬಸ್ ಮೂಡುಬಿದಿರೆ, ಕಾರ್ಕಳ ಹಾಗೂ ಮಂಗಳೂರು ಮಧ್ಯೆ ಸಂಚಾರಿಸಲು ಶಾಸಕರೇ ಅವಿರತವಾಗಿ ಪ್ರಯತ್ನ ನಡೆಸಿ ಸರ್ಕಾರಿ ಬಸ್ ಬಂದಿದೆ ಎಂದು ಪೋಸ್ಟರ್‌ನ್ನು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುತ್ತಿದ್ದರೆ, ಇತ್ತ […]

ಮೂಡುಬಿದಿರೆ): ಕರಾವಳಿಯ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ) ಯುವಜನತೆ ಕೃಷಿ ವಿಮುಖರಾಗುತ್ತಿದ್ದು, ಮಣ್ಣಿನೆಡೆಗೆ ಅವರನ್ನು ಸೆಳೆಯುವ ಇಂತಹ ಕಾರ್ಯಕ್ರಮಗಳು ಆದರ್ಶ ಮತ್ತು ಅನುಕರಣೀಯ’ ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ. ಜಗದೀಶ್ ಹೇಳಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಡಿ.೧೦ ರಿಂದ ಡಿ. ೧೫ರವರೆಗೆ ಆಯೋಜಿಸಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘೩೦ನೇ ವರ್ಷದ ಅಳ್ವಾಸ್ ವಿರಾಸತ್’ ಅಂಗವಾಗಿ ಏರ್ಪಾಡಿಸಲಾದ ಅನ್ವೇಷಣಾತ್ಮಕ ಶತಾಯುಷಿ ಕೃಷಿಕ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಕೃಷಿಮೇಳ, […]

ಮೂಡುಬಿದಿರೆ: ಆಳ್ವಾಸ್ ವಿರಾಸತ್’ ರಾಷ್ಟ್ರೀಯ ಉತ್ಸವವು ವೈಶಿಷ್ಟ್ಯಪೂರ್ಣ ಮೇಳಗಳ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಾಳೆಸಂಜೆ ೫.೩೦ರಿಂದ ೬.೩೦ರ ವರೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಜಿ. ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ.ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ […]

ಮೂಡುಬಿದಿರೆ : ೨೦೨೩-೨೪ ಹಾಗೂ ೨೪-೨೫ ನೇ ಸಾಲಿನ ೧೫ನೇ ಹಣಕಾಸು ಯೋಜನೆಯ ಅನುದಾನ, ನಗರೋತ್ಥಾನ ಹಂತ-೪ ಎಸ್.ಎಫ್ .ಸಿ ಮುಕ್ತ ನಿಧಿ ಅನುದಾನ ಹಾಗೂ ಪುರಸಭಾ ನಿಧಿಯ ಅನುದಾನದಡಿ ಸಹಿತ ಒಟ್ಟು ರೂ ೫.೧೨ ಕೋ.ವೆಚ್ಚದಲ್ಲಿ ನಡೆಯಲಿರುವ ವಿವಿಧ ಕಾಮಗಾರಿಗಳಿಗೆ ಶಾಸಕ ಉಮಾನಾಥ ಎ.ಕೋಟ್ಯಾನ್ ಶನಿವಾರ ಪುರಸಭೆಯಲ್ಲಿ ಶಿಲಾನ್ಯಾಸಗೈದರು.ಶಿಲಾನ್ಯಾಸಗೈದು ಮಾತನಾಡಿದ ಕೋಟ್ಯಾನ್ ಅವರು ಪುರಸಭೆಯ ಆರ್ಥಿಕ ಸ್ಥಿತಿಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಒಂದು ಕೋ.ವೆಚ್ಚದಲ್ಲಿ ಮೂಡುಬಿದಿರೆಯ ಹೃದಯ ಭಾಗದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ. ಜ್ಯೋತಿನಗರದ ಬಳಿ ಎಂ.ಆರ್.ಘಟಕವನ್ನು […]