



ಮೂಡುಬಿದಿರೆ: ತಾಲೂಕಿನ ಹೊಸಬೆಟ್ಟು ಗ್ರಾಮದ ಪಂಜಿರೇಲು ಕಾಯರ್‌ದ ಬಾಕ್ಯಾರ್ ಗಡುಪಡು ಸ್ಥಳದಲ್ಲಿ ಡಿಸೆಂಬರ್ ದೊಂಪದ ಬಲಿ ನಡೆಯಲಿದ್ದು, ಆ ದಿನ ಸಂಜೆ ಗಂಟೆ ೬ ಕ್ಕೆ ಸರಿಯಾಗಿ ಹೊಸಬೆಟ್ಟು ಗುತ್ತುವಿನಿಂದ ಕೊಡಮಣಿತ್ತಾಯ ಭಂಡಾರ ಹಾಗೂ ಬಾಂದೊಟ್ಟು ಬರ್ಕೆಯಿಂದ ದೈವ ಕುಮಾರನ ಭಂಡಾರ ಬರಲಿದೆ. ಹಾಗೂ ರಾತ್ರಿ ೧೨ ಗಂಟೆಗೆ ಮಹಾಮ್ಮಾಯಿ ದೇವಿಗೆ ಗದ್ದಿಗೆ ಪೂಜೆ ಹಾಗೂ ರಾತ್ರಿ ೧೨ ರಿಂದ ಮಹಾಮ್ಮಾಯಿ ದೇವಿಗೆ ಗದ್ದಿಗೆ ಪೂಜೆ ನಡೆಯಲಿದೆ

ಮೂಡುಬಿದಿರೆ: ಇಲ್ಲಿನ ವಿದ್ಯಾಗಿರಿ ಬಳಿ ನೂತನವಾಗಿ ಆರಂಭಗೊಂಡ ಅಶೋಕ್ ಅಂಚನ್ ಮಾಲಕತ್ವದ ಸ್ಟೋರಿಸ್ ಬೈ ಕ್ಯಾಂಡಿಡ್ ಕ್ಲಬ್ ನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಅವರು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಅಶೋಕ್ ಅವರು ತಮ್ಮ ಊರಿನಲ್ಲಿಯೇ ಇದ್ದುಕೊಂಡು ಸ್ಟೋರಿಸ್ ಬೈ ಕ್ಯಾಂಡಿಡ್ ಕ್ಲಬ್ ಎಂಬ ನೂತನವಾದ ಸ್ಟುಡಿಯೋವನ್ನು ಪ್ರಾರಂಭಿಸಿರುವುದು ಖುಷಿಯ ವಿಚಾರ. ಫೋಟೋಗ್ರಾಫಿ ವೃತ್ತಿಯಲ್ಲಿ ಸಾಕಷ್ಟು ಅವಕಾಶಗಳಿದ್ದು, ಮೂಡುಬಿದಿರೆ ವ್ಯಾಪ್ತಿಯಲ್ಲಿ ವಿವಿಧ ವಿದ್ಯಾಸಂಸ್ಥೆಗಳು, ಹಾಗೂ ೫೦ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದು, […]

ಮಂಗಳೂರು: ಮನುಷ್ಯನ ಅನೇಕ ದುರಾಸೆಯ ಫಲವೇ ಹವಾಮಾನ ವೈಪರೀತ್ಯಕ್ಕೆ ಮೂಲ ಕಾರಣ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿನ ಮುಂದುವರಿದ ಅಧ್ಯಯನಗಳ ರಾಷ್ಟ್ರೀಯ ಸಂಸ್ಥೆ (ಎನ್‌ಐಎಎಸ್)ಯ ಇಸ್ರೋ ಮುಖ್ಯ ಪ್ರಾಧ್ಯಾಪಕ ಡಾ. ಪಿ. ಜಿ. ದಿವಾಕರ್ ಅಭಿಪ್ರಾಯಪಟ್ಟರು.ಅವರು ಬುಧವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಎನ್‌ಐಎಎಸ್ ಜಂಟಿ ಆಶ್ರಯದಲ್ಲಿ ಉಳ್ಳಾಲದ ಬಿಎಂ ಶಾಲೆಯಲ್ಲಿ ಹಮ್ಮಿಕೊಂಡ ‘ವಿದ್ಯಾರ್ಥಿ- ವಿಜ್ಞಾನಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯು ತೀವ್ರ ಸಮಸ್ಯೆಯಾಗಿ ಬೆಳೆಯುತ್ತಿದೆ. ಅದರಲ್ಲೂ ,ಕರಾವಳಿ ಭಾಗದ ಜನರಿಗೆ ವಾತಾವರಣದಲ್ಲಾಗುವ […]

ಮೂಡುಬಿದಿರೆ: ಇಲ್ಲಿನ ಬೆಳುವಾಯಿ ಪೇಟೆ ಪಕ್ಕದಲ್ಲೇ ರಾತ್ರಿ ಹಗಲೆನ್ನದೆ ಹೈಟೆಕ್ ಇಸ್ಪೀಟು ದಂಧೆ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೆಲ ದಿನಗಳ ಹಿಂದೆ ಪೊಲೀಸರು ಇಲ್ಲಿನ ಇಸ್ಪೀಟು ಅಡ್ಡೆಗೆ ದಾಳಿ ನಡೆಸಿ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದೀಗ ಮತ್ತೆ ದೊಡ್ಡ ಮಟ್ಟಿನಲ್ಲಿ ಅದೂ ಕೂಡಾ ಪೇಟೆಯ ಪಕ್ಕದಲ್ಲೇ ನಡೆಯುತ್ತಿದೆ ಎಂಬ ಸಾರ್ವಜನಿಕರಿಂದ ದೂರು ಕೇಳಿಬರುತ್ತಿದೆ.

ಮೂಡುಬಿದಿರೆ: ಮಂಗಳೂರಿನ ಸಸಿಹಿತ್ಲುವಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಸ್ಪರ್ಧಿಸಿದ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.ಜನಪದ ನೃತ್ಯ (ಡೊಳ್ಳು- ಪ್ರಥಮ), ಜನಪದ ನೃತ್ಯ (ಏಕವ್ಯಕ್ತಿ) ಪ್ರಥಮ, ಕತೆ ಬರೆಯುವುದು- ಪ್ರಥಮ ಮತ್ತು ದ್ವಿತೀಯ, ಭಾಷಣ ಕಲೆ -ಪ್ರಥಮ, ಕವಿತೆ ಬರೆಯುವುದು -ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದಿದ್ದಾರೆ.ಪ್ರಥಮ ಬಹುಮಾನ ವಿಜೇತರು ರಾಜ್ಯಮಟ್ಟದ ಯುವಜನೋತ್ಸವಕ್ಕೆ ಆಯ್ಕೆಯಾಗಿದ್ದಾರೆ.ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ […]

ಮೂಡುಬಿದಿರೆ:”ವಿದ್ಯಾರ್ಥಿಗಳಾದವರು ತಮ್ಮ ವ್ಯಕ್ತಿತ್ವ, ಮಾನಸಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ನಮ್ಮ ದೇಶ, ನಮ್ಮ ಸಮಾಜ, ನಮ್ಮ ಕುಟುಂಬ ಎಂಬ ಭಾವನೆಯನ್ನು ಹೊಂದಿರಬೇಕು ಅಲ್ಲದೇ ನೈತಿಕ ಮೌಲ್ಯವನ್ನು ಬೆಳೆಸುವುದರೊಂದಿಗೆ ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವುದೇ ನಿಜವಾದ ಮಾನವೀಯತೆ. ವಿದ್ಯೆಯೆಂಬುದು ಮನುಷ್ಯನ ಪ್ರಶಸ್ತಿ ಪಾತ್ರದಲ್ಲಿ ಇರುವುದಲ್ಲ ಬದಲಾಗಿ ಅವನ ವ್ಯಕ್ತಿತ್ವದಲ್ಲಿರುತ್ತದೆ” ಎಂದು ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ ಬಿ ಪುರಾಣಿಕ್ ಹೇಳಿದರು.ಅವರು ಎಕ್ಸಲೆಂಟ್ ಸಿಬಿಎಸ್ ನ ಶಾಲಾ ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಮಾತನಾಡಿ […]

ಮಂಗಳೂರು:ಆಧುನಿಕ ಯುಗದಲ್ಲಿ ನಡೆದಿರುವ ಡಿಜಿಟಲ್ ಕ್ರಾಂತಿಯ ಮಾಧ್ಯಮ ಯುಗದಲ್ಲಿ ಪತ್ರಿಕೋದ್ಯಮದ ಉಳಿವಿನ ಬಗ್ಗೆ ಹಲವು ಸಂಪಾದಕರಿಗೆ ಭಯ ಶುರು ಆಗಿದೆ. ಆದರೆ ಡಿಜಿಟಲ್ ಆಗಿ ಧೈರ್ಯದಿಂದ ಮುನ್ನುಗ್ಗುವ ಅವಕಾಶವನ್ನು ಡಿಜಿಟಲ್ ಕ್ರಾಂತಿ ಮಾಧ್ಯಮಗಳಿಗೆ ನೀಡಿದೆ ಎಂದು ಹಿರಿಯ ಪತ್ರಕರ್ತರಾದ ಶಿವಸುಬ್ರಹ್ಮಣ್ಯ ಕೆ. ಹೇಳಿದ್ದಾರೆ.ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 5ನೇ జిಲ್ಲಾ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪತ್ರಿಕೋದ್ಯಮದ ತಮ್ಮ ಅನುಭವಗಳನ್ನು ಬಿಚ್ಚಿಟ್ಟ ಅವರು ಕಂಪೆನಿ ಕಲ್ಚರ್‌ಗೆ ಒಗ್ಗಿಕೊಳ್ಳಲು […]

ಮೂಡುಬಿದಿರೆ:ಕಲೆ ,ಸಾಹಿತ್ಯ,ಸಂಗೀತ, ಸಂಸ್ಕೃತಿ, ನೃತ್ಯ, ರಂಗಭೂಮಿ, ಚಲನಚಿತ್ರ, ಜಾನಪದ, ಕೃಷಿ, ಉದ್ಯಮ, ಶಿಕ್ಷಣ, ಸಮಾಜಸೇವೆ, ಪರಿಸರ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ವೈದ್ಯಕೀಯ, ಯಕ್ಷಗಾನ, ಆಡಳಿತ, ಕ್ರೀಡೆ ನಾಡು-ನುಡಿ, ಇತಿಹಾಸ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರಿಗೆ ಸಮಾಜಸೇವಕರಿಗೆ ,ಪ್ರತಿಭಾನ್ವಿತರಿಗೆ ,ಕಲಾಭೂಮಿ ಪ್ರತಿಷ್ಠಾನ ಬೆಂಗಳೂರು ವತಿಯಿಂದ “ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ” ಸಮಾರಂಭದಲ್ಲಿ ಸುಮಲತಾ ಬಜಗೋಳಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಹಿಂದೆ ಕನ್ನಡ ರಾಜ್ಯೋತ್ಸವ ದ ಪ್ರಯುಕ್ತ ಕಸ್ತೂರಿ ಸಿರಿಗನ್ನಡ ವೇದಿಕೆ (ರಿ) ಬೆಳಗಾವಿ ಇವರು ಅವರ […]

ಮೂಲ್ಕಿ: ಇಲ್ಲಿನ ಪೂಂಜಾ ಚಾರಿಟೇಬಲ್ ಟ್ರಸ್ಟ್ ಅವರ ವತಿಯಿಂದ ಅಶಕ್ತರಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ನೀಡಲಾಗುವ 7 ಲಕ್ಷ ರೂಪಾಯಿ ವೆಚ್ಚದ ಸಹಾಯಧನ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಅವರುಪಾಲ್ಗೊಂಡರು.ಈ ಸಂದರ್ಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷರಾದ ಸತೀಶ್ ಅಂಚನ್, ಟ್ರಸ್ಟ್ ನ ಮುಖ್ಯಸ್ಥರಾದ ಅರವಿಂದ ಪೂಂಜಾ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸುನೀಲ್ ಆಳ್ವ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಮೂಡುಬಿದಿರೆ:ಕೇಂದ್ರ ಪುರಸ್ಕ್ರತ ಅಮೃತ್ ೨.೦ ಅಭಿಯಾನದ “ಅಮೃತ್ ಮಿತ್ರ” ಕಾರ್ಯಕ್ರಮದ ತಾಂತ್ರಿಕೇತರ ಚಟುವಟಿಕೆ ಕಾರ್ಯಕ್ರಮದಡಿ ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿನ ಉದ್ಯಾನವನ ನಿರ್ವಹಣೆ ಮಾಡಲು ಡೇ-ನಲ್ಮ್ ಅಭಿಯಾನದಡಿ ಪಂಚಸೂತ್ರಗಳನ್ನು ಅನುಸರಿಸುವ ಅರ್ಹ ಮಹಿಳಾ ಸ್ವ-ಸಹಾಯ ಸಂಘಗಳಿAದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಅಮೃತ ಯೋಜನೆಯ ಕೇಂದ್ರ ಪುರಸ್ಕ್ರತ ಯೋಜನೆಯಾಗಿದ್ದು ರಾಜ್ಯದಲ್ಲಿ ನಗರ ಸಳ್ಥೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯ ಮುಖ್ಯ ಉದ್ದೇಶ ಅಮೃತ್ ೨.೦ ಅಭಿಯಾನದಡಿ ವಿವಿಧ ತಾಂತ್ರಿಕೇತರ ಚಟುವಟಿಕೆಗಳನ್ನು ಕೇಂದ್ರ ಪುರಸ್ಕ್ರತ ಯೋಜನೆಯಾದ ಡೇ-ನಲ್ಮ್ ಅಭಿಯಾನದಡಿ ಪುರಸಭೆಮೂಡುಬಿದಿರೆ ವ್ಯಾಪ್ತಿಯಲ್ಲಿ ರಚಿಸಲಾಗಿರುವ ಮಹಿಳಾ […]